Mysore
21
scattered clouds

Social Media

ಭಾನುವಾರ, 16 ಮಾರ್ಚ್ 2025
Light
Dark

ವಿಧಾನಸಭೆಯಲ್ಲಿ ಗದ್ದಲ: 15 ಎಎಪಿ ಶಾಸಕರ ಅಮಾನತು

ನವದೆಹಲಿ: ಅಬಕಾರಿ ನೀತಿ ಹಗರಣದ ವರದಿಗೆ ಸಂಬಂಧಿಸಿದಂತೆ ಆಡಳಿತರೂಢ ಬಿಜೆಪಿ ಜೊತೆ ಗದ್ದಲ ಉಂಟಾದ ಹಿನ್ನಲೆಯಲ್ಲಿ ಎಎಪಿ ಪಕ್ಷದ 15 ಶಾಸಕರನ್ನು ವಿಧಾನಸಭೆಯಿಂದ ಅಮಾನತುಗೊಳಿಸಲಾಗಿದೆ.

ಮಾಜಿ ಮುಖ್ಯಮಂತ್ರಿ ಅತಿಶಿ ಸೇರಿದಂತೆ ಎಎಪಿ ಪಕ್ಷದ ಹಿರಿಯ ನಾಯಕ ಗೋಪಾಲ್‌ ರೈ ಅವರನ್ನು ಕೂಡ ಅಮಾನತು ಮಾಡಲಾಗಿದೆ.

ಸಿಎಂ ಅವರ ಕಚೇರಿಯಿಂದ ಡಾ.ಬಿ.ಆರ್‌.ಅಂಬೇಡ್ಕರ್‌ ಮತ್ತು ಭಗತ್‌ ಸಿಂಗ್‌ ಅವರ ಛಾಯಾಚಿತ್ರಗಳನ್ನು ತೆಗೆದುಹಾಕಿರುವುದನ್ನು ಖಂಡಿಸಿ ವಿಧಾನಸಭೆಯಲ್ಲಿ ಎಎಪಿ ಸದಸ್ಯರು ಪ್ರತಿಭಟನೆ ನಡೆಸಿದರು. ಈ ಛಾಯಾಚಿತ್ರಗಳನ್ನು ತೆಗೆದು ಹಾಕಿ ಪ್ರಧಾನಿ ಮೋದಿ ಅವರ ಪೋಟೋವನ್ನು ಹಾಕಲಾಗಿದೆ ಎಂದು ಎಎಪಿ ಆರೋಪಿಸಿದೆ.

ಎಎಪಿ ವರದಿಯಲ್ಲಿ ಹಲವು ಭ್ರಷ್ಟಚಾರಗಳು ನಡೆದಿವೆ ಎಂದು ಸಿಎಂ ರೇಖಾ ಗುಪ್ತ ಅವರು ಕಂಟ್ರೋಲರ್‌ ಮತ್ತು ಆಡಿಟರ್‌ ಜನರಲ್‌ (ಸಿಎಜಿ) ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಿದರು.

ಈ ಹೇಳಿಕೆಗಳನ್ನು ಬಿಜೆಪಿ ತಳ್ಳಿಹಾಕಿದ್ದು, ಎಎಪಿ ಆಡಳಿತದ ಅವಧಿಯಲ್ಲಿ ಮುಖ್ಯಮಂತ್ರಿಗಳ ಮೇಜಿನ ಹಿಂದೆ ಡಾ.ಬಿ.ಆರ್.ಅಂಬೇಡ್ಕರ್‌ ಮತ್ತು ಭಗತ್‌ ಸಿಂಗ್‌ ಅವರ ಫೋಟೋಗಳನ್ನು ಪಕ್ಕದ ಗೋಡೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಸಿಎಂ ಕಚೇರಿಯ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.

 

Tags: