ನವದೆಹಲಿ: ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಇಂದು(ಜೂ.30)ಭಾರತೀಯ ಸೇನೆಯ ನೂತನ ಮುಖ್ಯಸ್ಥರಾಗಿ ಅಧಿಕಾರಿ ವಹಿಸಿಕೊಂಡರು.
ಜನರಲ್ ಮನೋಜ್ ಪಾಂಡೆಯವರು ಇಂದು(ಜೂ.30) ನಿವೃತ್ತರಾಗಲಿದ್ದು, ಸೇವಾ ಹಿರಿತನ ಆಧರಿಸಿ ಉಪೆಂದ್ರ ದ್ವಿವೇದಿಯವರನ್ನು ಸೇನಾ ಮುಖ್ಯಸ್ಥರನ್ನಾಗಿ ರಕ್ಷಣಾ ಸಚಿವಾಲಯ ನೇಮಿಸಿದೆ.
ಸೇನಾಯ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದ ದ್ವಿವೇದಿ ಅವರು, ಚೀನಾ ಮತ್ತು ಪಾಕಿಸ್ತಾನದ ಗಡಿಗಳಲ್ಲಿ ಅಪಾರ ಕಾರ್ಯಾಚರಣೆಯ ಅನುಭವ ಹೊಂದಿದ್ದಾರೆ. 2022-2024 ರವರೆಗೆ ಉತ್ತರ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಂಗ್ ಇನ್-ಚೀಫ್ ಆಗಿಯೂ ಸಹ ಸೇವೆ ಸಲ್ಲಿಸಿದ್ದಾರೆ.
ಹೆಚ್ಚುವರಿಯಾಗಿ ಐಜಿಎಆರ್ ಮತ್ತು ಅಸ್ಸಾಂ ರೈಫಲ್ಸ್‌ನ ಸೆಕ್ಟರ್ ಕಮಾಂಡರ್ ಆಗಿ ತೀವ್ರವಾದ ಭಯೋತ್ಪಾದನಾ ನಿಗ್ರಹ ಕಾರ್ಯಚರಣೆಗಳ ಸಮಯದಲ್ಲಿ ಸೇವೆ ಸಲ್ಲಿಸಿ, ಈಶಾನ್ಯದಲ್ಲಿಯೂ ವಿವಿಧ ಕಮಾಂಡ್ ಸ್ಥಾನಗಳನ್ನು ಹೊಂದಿದ್ದರು.





