Mysore
19
mist

Social Media

ಬುಧವಾರ, 24 ಡಿಸೆಂಬರ್ 2025
Light
Dark

Union Budget 2025| ಮುಂದಿನ 50 ವರ್ಷಗಳ ಅವಧಿಗೆ ಎಲ್ಲಾ ರಾಜ್ಯಗಳಿಗೆ ಬಡ್ಡಿ ರಹಿತ ಸಾಲಕ್ಕೆ 1.5ಲಕ್ಷ ಕೋಟಿ ಮೀಸಲು

ನವದೆಹಲಿ: ಮುಂದಿನ 50 ವರ್ಷಗಳ ಅವಧಿಗೆ ಎಲ್ಲಾ ರಾಜ್ಯಗಳಿಗೆ ಬಡ್ಡಿ ರಹಿತ ಸಾಲಕ್ಕೆ 1.5 ಲಕ್ಷ ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಿಳಿಸಿದ್ದಾರೆ.

ಸಂಸತ್‌ ಭವನದಲ್ಲಿ ಇಂದು(ಫೆಬ್ರವರಿ.1) ಕೇಂದ್ರ ಬಜೆಟ್‌ ಮಂಡಿಸಿದ ಅವರು, ರಾಜ್ಯಗಳಿಗೆ 50 ವರ್ಷಗಳ ಅವಧಿಗೆ ಬಡ್ಡಿ ರಹಿತವಾಗಿ 1.5 ಲಕ್ಷ ಕೋಟಿ ರೂಪಾಯಿಯ ನೆರವನ್ನು ಎಲ್ಲಾ ರಾಜ್ಯಗಳ ಮೂಲಸೌಕಾರ್ಯ ಅಭಿವೃದ್ಧಿಗೆ ಮೀಸಲೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ.

2021ರಲ್ಲಿ ಬಿಜೆಪಿ ಸರ್ಕಾರದ ನೇತೃತ್ವದಲ್ಲಿ ಈ ಯೋಜನೆಯನ್ನು ಪ್ರಥಮ ಬಾರಿಗೆ ಜಾರಿಗೊಳಿಸಲಾಗಿತ್ತು. ಈ ಆಧಾರದ ಮೇಲೆ 2025-30ರವರೆಗೂ ಈ ಯೋಜನೆಯನ್ನು ವಿಸ್ತರಿಸಲಾಗಿದೆ. ಅಲ್ಲದೇ ನೂತನ ಯೋಜನೆಗಳಿಗಾಗಿ 10 ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ ಎಂದು ಹೇಳಿದ್ದಾರೆ.

Tags:
error: Content is protected !!