Mysore
23
mist

Social Media

ಶನಿವಾರ, 06 ಡಿಸೆಂಬರ್ 2025
Light
Dark

ಮುಂದಿನ ಐದು ವರ್ಷದಲ್ಲಿ ನಿರುದ್ಯೋಗ ಮುಕ್ತ ದೆಹಲಿ : ಕೇಜ್ರಿವಾಲ್‌ ಭರವಸೆ

ಹೊಸದಿಲ್ಲಿ: ಮುಂಬರುವ ಐದು ವರ್ಷಗಳಲ್ಲಿ ದೆಹಲಿಯಲ್ಲಿ ನಿರುದ್ಯೋಗ ಸಮಸ್ಯೆಯನ್ನು ಕೊನೆಗಾಣಿಸಲಾಗುವುದೇ ಎಎಪಿಯ ಗುರಿ ಎಂದು ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ.

ಗುರುವಾರ ವಿಡಿಯೋ ಸಂದೇಶದ ಮೂಲಕ ಮಾಹಿತಿ ನೀಡಿರುವ ಅವರು, ಯುವ ಜನತೆಗೆ ಉದ್ಯೋಗ ನೀಡುವುದೇ ನಮ್ಮ ಆದ್ಯತೆಯಾಗಲಿದೆ. ಇದಕ್ಕಾಗಿ ನಮ್ಮ ತಂಡ ಯೋಜನೆಯನ್ನು ಸಿದ್ಧಪಡಿಸುತ್ತಿದೆ ಎಂದು ಭರವಸೆ ನೀಡಿದರು.

ಉದ್ಯೋಗ ಸೃಷ್ಟಿಸುವುದು ನಮಗೆ ತಿಳಿದಿದೆ. ನಮ್ಮ ಉದ್ದೇಶಗಳೂ ಪ್ರಮಾಣಿಕವಾಗಿದೆ. ಜನರ ಬೆಂಬಲದೊಂದಿಗೆ ನಾವು ಮುಂದಿನ ಐದು ವರ್ಷಗಳಲ್ಲಿ ದೆಹಲಿಯಲ್ಲಿ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸುತ್ತೇವೆ ಎಂದು ಪ್ರತಿಪಾದಿಸಿದರು.

Tags:
error: Content is protected !!