Mysore
17
overcast clouds

Social Media

ಗುರುವಾರ, 25 ಡಿಸೆಂಬರ್ 2025
Light
Dark

UG-NEET: ನೀಟ್‌ ರದ್ದತಿಗೆ ನಿರ್ಣಯ ಅಂಗೀಕರಿಸಿದ ತಮಿಳುನಾಡು ವಿಧಾನಸಭೆ

ಚೆನ್ನೈ: ನೀಟ್‌-ಯುಜಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಗದ್ದಲದ ನಡುವೆಯೇ ತಮಿಳುನಾಡು ವಿಧಾನಸಭೆ ಇಂದು(ಜೂ.28) ದೃಢ ನಿಲುವು ತಳೆದಿದ್ದು, ನಿಟ್‌ ಪರೀಕ್ಷೆಯನ್ನು ರದ್ದುಪಡಿಸಬೇಕು ಮತ್ತು ಪ್ಲಸ್‌-2 (12 ನೇ ತರಗತಿ) ಅಂಕಗಳ ಆಧಾರದ ಮೇಲೆ ರಾಜ್ಯ ಸರ್ಕಾರಗಳು ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ನಡೆಸುವ ಹಿಂದಿನ ವ್ಯವಸ್ಥೆಯನ್ನು ಮರುಸ್ಥಾಪಿಸಬೇಕು ಎಂದು ತಮಿಳುನಾಡು ವಿಧಾನಸಭೆಯು ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದೆ.

ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರ ಸರ್ಕಾರ ಈ ನಿರ್ಣಯವನ್ನು ಮಂಡಿಸಿದ್ದು, ಈ ವೇಳೆ ಬಿಜೆಪಿಯ ಶಾಸಕರು ಸಭಾತ್ಯಾಗ ನಡೆಸಿದರೆ, ಹಲವಾರು ಪ್ರದೇಶಿಕ ಪಕ್ಷಗಳು ನಿರ್ಣಯವನ್ನು ಬೆಂಬಲಿಸಿದವು.

ಹಲವು ವರ್ಷಗಳಿಂದ ತಮಿಳುನಾಡು ಸರ್ಕಾರಗಳು ಹಾಗೂ ಇಲ್ಲಿನ ಸಾರ್ವಜನಿಕರು ನೀಟ್‌ ವಿರುದ್ಧ ಹೋರಾಟವನ್ನು ನಡೆಸುತ್ತಿದ್ದಾರೆ. ನೀಟ್‌ ಪರೀಕ್ಷೆಯ ಸಮಸ್ಯೆಗಳನ್ನು ಮನಗಂಡಿರುವ ವಿವಿಧ ರಾಜ್ಯಗಳಲ್ಲಿ ನೀಟ್ ವಿರೋಧವು ಬಲಗೊಳ್ಳುತ್ತಿದೆ ಎಂದು ಸ್ಟಾಲಿನ್‌ ಹೇಳಿದರು.

Tags:
error: Content is protected !!