Mysore
24
mist

Social Media

ಸೋಮವಾರ, 08 ಡಿಸೆಂಬರ್ 2025
Light
Dark

ರಾಷ್ಟ್ರಧ್ವಜಾರೋಹಣ ಮಾಡುವಾಗ ವಿದ್ಯುತ್‌ ಸ್ಪರ್ಶದಿಂದ ಇಬ್ಬರು ಸಾವು

ರಾಂಚಿ: 75ನೇ ಸ್ವಾತಂತ್ರ್ಯ ದಿನದಂದು ಜಾರ್ಖಂಡ್‌ನಲ್ಲಿ ರಾಷ್ಟ್ರಧ್ವಜಾರೋಹಣ ಮಾಡುವಾಗ ಎರಡು ಕಡೆ ಇಬ್ಬರು ವ್ಯಕ್ತಿಗಳಿಗೆ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ, ಇದರ ಹಿಂದಿನ ದಿನವು ಇಂತಹ ಘಟನೆ ನಡೆದಿದ್ದು ಸಾವಿನ ಸಂಖ್ಯೆ ಐದಕ್ಕೆ ಏರಿದೆ. ಎಂದು ಪೊಲೀಸರು ತಿಳಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನ (ಭಾನುವಾರ) ರಾಂಚಿಯಲ್ಲಿ ಇಂತಹದೇ ಘಟನೆ ನಡೆದಿದೆ ಒಂದೇ ಕುಟುಂಬದ ಮೂವರು ಈ ಘಟನೆಯಿಂದ ಸಾವನ್ನಪ್ಪಿದ್ದಾರೆ. ಬೊಕಾರೊ ಮತ್ತು ಧನ್‌ಬಾದ್ ಜಿಲ್ಲೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವಾಗ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ.

ಭಾರತ್ ಕೋಕಿಂಗ್ ಕೋಲ್ ಲಿಮಿಟೆಡ್ (ಬಿಸಿಸಿಎಲ್) ಅಡಿಯಲ್ಲಿ ನ್ಯೂ ಆಕಾಶಕಿನಾರಿ ಕಾಲೇರಿಯ ಐವರು ಕಲ್ಲಿದ್ದಲು ಕಾರ್ಮಿಕರು ಧನ್‌ಬಾದ್ ಜಿಲ್ಲೆಯ ಕತ್ರಾಸ್ ಪೊಲೀಸ್ ಠಾಣಾ ಪ್ರದೇಶದಲ್ಲಿ ಧ್ವಜಾರೋಹಣಕ್ಕಾಗಿ ಕಂಬವನ್ನು ನಿರ್ಮಿಸುವಾಗ ಹೈಟೆನ್ಷನ್ ತಂತಿಯ ಸ್ಪರ್ಶಗೊಂಡು ಸಾವನ್ನಪ್ಪಿದ್ದಾರೆ. ಇದರಿಂದ 38 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದು, ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಷ್ಟ್ರಧ್ವಜ ಬಿಚ್ಚಲು ನಿರ್ಮಿಸುತ್ತಿದ್ದ ಕಂಬವೊಂದು ಹೈಟೆನ್ಷನ್ ತಂತಿಗೆ ತಗುಲಿ ಈ ಘಟನೆ ನಡೆದಿದೆ. ಕತ್ರಾಸ್ ಪೊಲೀಸ್ ಠಾಣೆ ಪ್ರಭಾರಿ ರಣಧೀರ್ ಕುಮಾರ್ ತಿಳಿಸಿದ್ದಾರೆ.

ಬೊಕಾರೊ ಪೊಲೀಸ್ ಲೈನ್‌ನಲ್ಲಿಯು ಇದೇ ರೀತಿಯ ಘಟನೆ ನಡೆದಿದ್ದು, ಧ್ವಜ ಹಾಕುವ ವೇಳೆ 40 ವರ್ಷದ ಕ್ಲೀನರ್ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ. ಪೋಲ್ ಹೈ-ಟೆನ್ಷನ್ ತಂತಿಯ ಸ್ಪರ್ಶದಿಂದ ವ್ಯಕ್ತಿ ಸಾವನ್ನಪ್ಪಿದ್ದಾನೆ, ಆದರೆ ಪೊಲೀಸ್ ಅಸೋಸಿಯೇಶನ್‌ನ ಕಾನ್‌ಸ್ಟೆಬಲ್ ಮತ್ತು ಅಧಿಕಾರಿಯೊಬ್ಬರು ಘಟನೆಯಲ್ಲಿ ಸಣ್ಣಪುಟ್ಟ ಗಾಯಗೊಂಡಿದ್ದಾರೆ ಎಂದು ಬೊಕಾರೊ ನಗರದ ಉಪ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಕುಮಾರ್ ಪಿಟಿಐಗೆ ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!