ಆಂಧ್ರಪ್ರದೇಶ: ತಿರುಮಲ ವೆಂಕಟೇಶ್ವರ ದೇವಸ್ಥಾನ ಹಾಗೂ ಸಂಯೋಜಿತ ದೇವಸ್ಥಾನಗಳಲ್ಲಿ ಸ್ಥಾಪಿಸಲಾದ ಹುಂಡಿಗಳಿಗೆ ಹಾಕಿರುವ ವಾಚ್‌ಗಳು ಮತ್ತು ಮೊಬೈಲ್ ಫೋನ್‌ಗಳನ್ನು ತಿರುಮಲ ತಿರುಪತಿ ದೇವಸ್ಥಾನವು ಹರಾಜು ಮಾಡಲು ಮುಂದಾಗಿದೆ.
ಕಲಿಯುಗದ ಪ್ರತ್ಯಕ್ಷ ದೈವ ತಿರುಪತಿಯ ವೆಂಕಟೇಶ್ವರ ಸ್ವಾಮಿಯನ್ನು ಪ್ರತಿನಿತ್ಯ ಸಾವಿರಾರು ಮಂದಿ ದರ್ಶನ ಪಡೆದುಕೊಳ್ಳುತ್ತಾರೆ. ಕೆಲವರು ಕಾಲ್ನಡಿಗೆ ಮೂಲಕ ದರ್ಶನಕ್ಕೆ ಆಗಮಿಸಿದರೆ, ಮತ್ತೆ ಕೆಲವರು ತಮ್ಮ ಸ್ವಂತ ವಾಹನದ ಮೂಲಕ ತಿರುಪತಿಗೆ ಬಂದು ವೆಂಕಟೇಶ್ವರನ ದರ್ಶನ ಮಾಡುತ್ತಾರೆ.
ತಿರುಪತಿಗೆ ಆಗಮಿಸುವ ಸಾವಿರಾರು ಮಂದಿ ದೇವಾಲಯದ ಹುಂಡಿಗೆ ಕಾಣಿಕೆ ಜೊತೆ ಜೊತೆಗೆ ವಾಚ್ ಹಾಗೂ ಸ್ಮಾರ್ಟ್‌ಫೋನ್ ಹಾಕಿ ಹರಕೆ ತೀರಿಸುತ್ತಾರೆ. ಭಕ್ತರು ಕಾಣಿಕೆಗಳ ರೂಪದಲ್ಲಿ ಹಾಕಿರುವ ವಾಚ್ ಹಾಗೂ ಸ್ಮಾರ್ಟ್‌ಫೋನ್‌ಗಳನ್ನು ಈಗ ಟಿಟಿಡಿ ಹರಾಜು ಹಾಕುತ್ತಿದೆ. ಈ ಮೂಲಕ ಇವುಗಳನ್ನು ಖರೀದಿ ಮಾಡಬೇಕು ಎನ್ನುವವರಿಗೆ ಸುವರ್ಣಾವಕಾಶ ಸಿಕ್ಕಿದೆ.
14 ಹೊಸ ಹಾಗೂ ಬಳಸಿದ ವಾಚ್‌ಗಳ ಲಾಟ್‌ಗಳ ಜೊತೆಗೆ 24 ಸೆಲ್‌ಫೋನ್‌ಗ ಲಾಟ್‌ಗಳನ್ನು ಹರಾಜಿಗೆ ಇಡಲಾಗಿದೆ. ಆಸಕ್ತರು ಈ ಹರಾಜಿನಲ್ಲಿ ಭಾಗವಹಿಸಿ ಇವುಗಳನ್ನು ಕೊಂಡುಕೊಳ್ಳಬಹುದು ಎಂದು ಟಿಟಿಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಹರಾಜು ಪ್ರಕ್ರಿಯೆ ಜೂನ್ 24ರಂದು ನಡೆಯಲಿದ್ದು, ನೀವು ಕೂಡ ತಿರುಪತಿಗೆ ಹೋಗಿ ಸೂಕ್ತ ಬೆಲೆಯಲ್ಲಿ ಸ್ಮಾರ್ಟ್‌ಫೋನ್ ಹಾಗೂ ವಾಚ್‌ಗಳನ್ನು ಖರೀದಿ ಮಾಡಬಹುದಾಗಿದೆ.





