Mysore
16
overcast clouds

Social Media

ಮಂಗಳವಾರ, 10 ಫೆಬ್ರವರಿ 2026
Light
Dark

ಅಕ್ರಮ ವಲಸಿಗರ ಗಡಿಪಾರು: ಟ್ರಂಪ್‌ ಸಮರ್ಥನೆ

ವಾಷಿಂಗ್ಟನ್‌: ಅಕ್ರಮವಾಗಿ ನೆಲೆಸಿರುವ ವಲಸಿಗರನ್ನು ಗಡೀಪಾರು ಮಾಡುವ ಮೂಲಕ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಅಮೇರಿಕಾದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಲೇ ಅಕ್ರಮ ವಲಸಿಗರನ್ನು ಗಡೀಪಾರು ಮಾಡುವುದಾಗಿ ಹೇಳಿದ ಟ್ರಂಪ್‌ ಅದರಂತೆ ಭಾರತ ಸೇರಿ ಹಲವು ದೇಶಗಳಿಗೆ ಹಲವರನ್ನು ಗಡಿಪಾರು ಮಾಡಿದ್ದಾರೆ.

ಪೊಲಿಟಿಕಲ್‌ ಆಕ್ಷನ್‌ ಕಾನ್ಫರೆನ್ಸ್‌ನಲ್ಲಿ ಮಾತನಾಡಿರುವ ಅವರು, ಅನ್ಯಲೋಕದ ಅಪರಾಧಿಗಳನ್ನು ಮನೆಗೆ ಕಳುಹಿಸಿ, ಕೊಳಚೆ ಪ್ರದೇಶವನ್ನು ಬರಿದಾಗಿಸಿ, ಜನರಿಂದ ಸರ್ಕಾರವನ್ನು ಮರುಸ್ಥಾಪಿಸಲಾಗಿದೆ ಎಂದಿದ್ದಾರೆ.

ವಂಚನೆ ಮಾಡುವವರು, ಸುಳ್ಳು ಹೇಳುವವರು, ಮೋಸ ಮಾಡುವವರು, ಜಾಗತಿಕವಾದಿಗಳು ಮತ್ತು ಆಳವಾಗಿ ಅಧಿಕಾರಿಶಾಹಿಗಳಾಗಿದ್ದವರನ್ನು ಪ್ಯಾಕ್‌ ಮಾಡಿ ಗಡಿಪಾರು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಈಗಾಗಲೇ ಅಮೇರಿಕಾದಲ್ಲಿ ಅಕ್ರಮವಾಗಿ ನೆಲೆಸಿದ್ದ 332 ಭಾರತೀಯ ಮೂಲದವರನ್ನು ಮೂರು ಬ್ಯಾಚ್‌ಗಳಲ್ಲಿ ಅಮೇರಿಕಾದಿಂದ ಭಾರತಕ್ಕೆ ಗಡಿಪಾರು ಮಾಡಲಾಗಿದೆ.

 

Tags:
error: Content is protected !!