ಹೊಸದಿಲ್ಲಿ : ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮ ಒಪ್ಪಂದ ಮಾಡಿಸಿದ್ದು ನಾನೇ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 13 ಸಂದರ್ಭಗಳಲ್ಲಿ ಸಾರ್ವಜನಿಕವಾಗಿ ಕಹಳೆ ಬಾರಿಸಿದ್ದಾರೆ. ಆದರೆ, ಈ ಹೇಳಿಕೆ ಬಗ್ಗೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಯಾವಾಗ ಮಾತನಾಡುತ್ತಾರೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಟ್ರಂಪ್ ಮೇ 10, 2025 ರಿಂದ ಜೂನ್ 13, 2025 ರ ನಡುವಿನ 34 ದಿನಗಳಲ್ಲಿ 3 ವಿಭಿನ್ನ ದೇಶಗಳಲ್ಲಿ 13 ವಿಭಿನ್ನ ಸಂದರ್ಭಗಳಲ್ಲಿ ಅಮೆರಿಕದೊಂದಿಗಿನ ವ್ಯಾಪಾರವನ್ನು ಕ್ಯಾರೆಟ್ ಮತ್ತು ಕೋಲಿನಂತೆ ಬಳಸಿಕೊಂಡು ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಒಪ್ಪಂದ ಮಾಡಿಸಿದ್ದು ನಾನು ಎಂದು ಸಾರ್ವಜನಿಕವಾಗಿ ಕಹಳೆ ಮೊಳಗಿಸಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹೇಳಿದ್ದಾರೆ.
ಟ್ರಂಪ್ ಎರಡೂ ದೇಶಗಳ ಮೇಲೆ ಸಮಾನವಾಗಿ ಹೊಗಳಿಕೆಯ ಸುರಿಮಳೆಗೈದಿದ್ದಾರೆ. ನೀವು ಯಾವಾಗ ಮಾತನಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ಉಲ್ಲೇಖಗಳು ಮತ್ತು ಮಾಧ್ಯಮ ವರದಿಗಳ ಲಿಂಕ್‍ಗಳೊಂದಿಗೆ ಟ್ರಂಪ್ ಹೇಳಿಕೆಗಳನ್ನು ನೀಡಿದ ಸಂದರ್ಭಗಳ ಪಟ್ಟಿ ಮತ್ತು ವಿವರಗಳನ್ನು ರಮೇಶ್ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.





