Mysore
28
scattered clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ರಷ್ಯಾ-ಉಕ್ರೇನ್‌ ಯುದ್ಧ ನಿಲ್ಲಿಸಿ: ಟ್ರಂಪ್‌

ವಾಷಿಂಗ್ಟನ್‌: ಅಮೆರಿಕಾದ ಅಧ್ಯಕ್ಷ ಟ್ರಂಪ್‌ ಅವರು ಹಾಗೂ ಉಕ್ರೇನ್‌ ಅಧ್ಯಕ್ಷ ಝೆಲೆನ್ಸ್ಕಿ ಅವರ ನಡುವೆ ದ್ವಿಪಕ್ಷೀಯ ಒಪ್ಪಂದ ವೇಳೆ ವಾಗ್ವಾದ ನಡೆದಿದ್ದು, ಈ ಮಧ್ಯೆ ರಷ್ಯಾ-ಉಕ್ರೇನ್‌ ಯುದ್ಧವನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ.

ಅಮೆರಿಕಾದ ಶ್ವೇತಭವನದಲ್ಲಿ ಇಂದು(ಮಾರ್ಚ್.‌1) ದ್ವಿಪಕ್ಷೀಯ ಒಪ್ಪಂದದ ನಡೆಯುತ್ತಿದ್ದು, ಆರಂಭದಲ್ಲಿ ಅಮೆರಿಕ ಮತ್ತು ಉಕ್ರೇನ್‌ ನಡುವೆ ಖನಿಜ ಒಪ್ಪಂದಗಳ ನಡುವೆ ಚರ್ಚೆ ನಡೆಯಿತು. ಈ ವೇಳೆ ಭದ್ರತಾ ವಿಚಾರಗಳ ಬಗ್ಗೆ ಚರ್ಚಿಸಲು ಮುಂದಾದರು, ಆದರೆ ಟ್ರಂಪ್‌ ನಾನು ಭದ್ರತೆಯ ಬಗ್ಗೆ ಮಾತನಾಡಲು ಬಯಸುವುದಿಲ್ಲ. ಈಗ ನಾನು ಖನಿಜ ಒಪ್ಪಂದಗಳ ಬಗ್ಗೆ ಮಾತನಾಡಲು ಬಯಸುತ್ತೇನೆ ಎಂದರು. ಈ ಮಧ್ಯೆ ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದಂತೆ, ಟ್ರಂಪ್‌ ಉಕ್ರೇನ್‌ ಅಧ್ಯಕ್ಷ ಝೆಲೆನ್ಸ್ಕಿ ಅವರನ್ನು ಶ್ವೇತಭವನದಿಂದ ಹೊರಹೋಗುವಂತೆ ಸೂಚಸುತ್ತಿದ್ದಂತೆ ಹೊರ ನಡೆದಿದ್ದಾರೆ.

ಇನ್ನು ಝಲೆನ್ಸ್ಕಿ ಭದ್ರತಾ ವಿಚಾರಗಳ ಬಗ್ಗೆ ಚರ್ಚಿಸಲು ಮುಂದಾದಾಗ ನೀವು ಲಕ್ಷಾಂತರ ಜನರರ ಜೀವಗಳೊಂದಿಗೆ ಆಟವಾಡುತ್ತಿದ್ದೀರಿ. ಅಲ್ಲದೇ 3ನೇ ಮಹಾಯುದ್ಧದಿಂದ ಜೂಜಾಡುತ್ತಿದ್ದೀರಿ, ನಿಮ್ಮಿಂದ ಯುದ್ಧ ನಡೆಯಬಹುದು. ನೀವು ಹೀಗೆ ಮಾಡುತ್ತಿರುವುದು ಈ ದೇಶಕ್ಕೆ ಅಗೌರವವನ್ನು ಉಂಟು ಮಾಡಿದೆ ಎಂದು ವಾಗ್ದಾಳಿ ನಡೆಸಿದರು.

ನೀವು ಧೈರ್ಯವಂತರಿರಬಹುದು, ಆದರೂ ಖನಿಜ ಒಪ್ಪಂದಕ್ಕೆ ಸಹಿ ಹಾಕಲೇಬೇಕು. ಇಲ್ಲದೇ ನಾವು ನಿಮಗೆ ಸಹಾಯ ಮಾಡುವುದಿಲ್ಲ. ನಾವು ಸಹಾಯ ಮಾಡದಿದ್ದರೆ, ನೀವು ಯುದ್ಧ ಮುಂದುವರಿಸಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ನೀವು ಸಂಕಷ್ಟ ಎದುರಿಸಬೇಕಾಗುತ್ತದೆ ಎಂದರು. ಇದೇ ವೇಳೆ ಝೆಲೆನ್ಸ್ಕಿ ಮಾತನಾಡಿ, ಪತ್ರಕರ್ತರ ಎದುರು ನೀವು ಈ ರೀತಿ ಮಾತನಾಡುವುದು ಗೌರವ ತರುವುದಿಲ್ಲ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಟ್ರಂಪ್‌ ನಿಮ್ಮಿಂದ ಜಗತ್ತಿನಲ್ಲಿ 3ನೇ ಮಹಾಯುದ್ಧ ಸಂಭವಿಸಬಹದು. ಅಲ್ಲದೇ ಇದು ಇಡೀ ವಿಶ್ವವೇ ಸಮಸ್ಯೆಗೆ ಸಿಲುಕಿಕೊಳ್ಳಬಹುದು ಎಂದು ಕಿಡಿಕಾರಿದರು.

ಉಕ್ರೇನ್‌ಗೆ ಈಗಾಗಲೇ ಫ್ರಾನ್ಸ್‌, ಬ್ರಿಟನ್‌ ಹಾಗೂ ಇತರ ದೇಶಗಳು ಭದ್ರತೆ ಒದಗಿಸುತ್ತಿವೆ ಎಂದು ನನಗೆ ತಿಳಿದಿದೆ. ಆದರೆ ನಾವು ಯುದ್ಧವನ್ನು ಮುಂದುವರಿಸಲು ಸಿದ್ಧರಿಲ್ಲ. ಈ ಸಮಸ್ಯೆಯನ್ನು ಸಮಾಪ್ತಿ ಮಾಡಲು ಎದುರು ನೋಡುತ್ತಿದ್ದೇವೆ. ನಾವು ಉಕ್ರೇನ್‌ಗೆ ಬೇರೊಂದು ರೀತಿಯಲ್ಲಿ ಭದ್ರತೆ ನೀಡುತ್ತೇವೆ. ನಮ್ಮ ಕಾರ್ಮಿಕರು ಅಲ್ಲಿಯೇ ಇದ್ದು ಖನಿಜ ಸಂಪತ್ತನ್ನು ಹೊರ ತೆಗೆಯುತ್ತಾರೆ. ನಿಮ್ಮ ರಾಷ್ಟ್ರದಲ್ಲಿ ನಾವು ಉತ್ತಮ ಉತ್ಪನ್ನಗಳನ್ನು ತಯಾರಿಸುತ್ತೇವೆ ಎಂದು ವಿಶ್ವಾಸ ನೀಡಿದರು.

Tags:
error: Content is protected !!