Mysore
16
clear sky

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಸಂಧ್ಯಾ ಥಿಯೇಟರ್‌ನಲ್ಲಿ ಕಾಲ್ತುಳಿತ ಪ್ರಕರಣ: ಮೃತ ಮಹಿಳೆ ಕುಟುಂಬಕ್ಕೆ 2 ಕೋಟಿ ಪರಿಹಾರ

ಹೈದರಾಬಾದ್:‌ ಅಲ್ಲು ಅರ್ಜುನ್‌ ನಟನೆಯ ಪುಷ್ಪ-2 ಪ್ರೀಮಿಯರ್‌ ಶೋ ವೇಳೆ ಕಾಲ್ತುಳಿತದಲ್ಲಿ ಮೃತಪಟ್ಟ ಮಹಿಳೆ ಕುಟುಂಬಕ್ಕೆ ಅಲ್ಲು ಅರವಿಂದ್‌ ಅವರು 2 ಕೋಟಿ ರೂ ಪರಿಹಾರವನ್ನು ಘೋಷಿಸಿದ್ದಾರೆ.

ಡಿಸೆಂಬರ್.‌4ರಂದು ಪುಷ್ಪ-2 ಪ್ರೀಮಿಯರ್‌ ವೇಳೆ ನಡೆದ ಕಾಲ್ತುಳಿತದಲ್ಲಿ ರೇವತಿ ಎಂಬುವವರು ಮೃತಪಟ್ಟಿದ್ದು, ರೇವತಿ ಪುತ್ರ ಶ್ರೀಜಾ ಕೂಡ ತೀವ್ರ ಗಂಭೀರ ಸ್ಥಿತಿಯಲ್ಲಿದ್ದಾರೆ.

ಈ ಹಿನ್ನೆಲೆಯಲ್ಲಿ ಈಗಾಗಲೇ ನಟ ಅಲ್ಲು ಅರ್ಜುನ್‌ ತಂದೆ ಅಲ್ಲು ಅರವಿಂದ್‌ ಅವರು ಕುಟುಂಬಸ್ಥರನ್ನು ಭೇಟಿಯಾಗಿ ಧೈರ್ಯ ತುಂಬಿದ್ದಾರೆ.

ಈ ಹಿಂದೆ ಮೃತ ಮಹಿಳೆಯ ಕುಟುಂಬಸ್ಥರಿಗೆ 25 ಲಕ್ಷ ರೂ ಕೊಡುವುದಾಗಿ ತಿಳಿಸಿದ್ದರು. ಆದರೆ ಈಗ ಮೃತ ರೇವತಿ ಕುಟುಂಬಕ್ಕೆ 2 ಕೋಟಿ ರೂ ಪರಿಹಾರ ನೀಡುವುದಾಗಿ ಅಲ್ಲು ಅರವಿಂದ್ ತಿಳಿಸಿದ್ದಾರೆ.

ನಟ ಅಲ್ಲು ಅರ್ಜುನ್‌ ಕಡೆಯಿಂದ ಒಂದು ಕೋಟಿ ರೂ ಹಾಗೂ ಪುಷ್ಪ-2 ನಿರ್ಮಾಪಕರು ಮತ್ತು ನಿರ್ದೇಶಕ ಸುಕುಮಾರ್‌ ಕಡೆಯಿಂದ 1 ಕೋಟಿ ರೂಪಾಯಿಯನ್ನು ಮೃತ ಮಹಿಳೆ ಕುಟುಂಬಕ್ಕೆ ಕೊಡಲು ನಿರ್ಧರಿಸಿದ್ದಾರೆ.

ಡಿಸೆಂಬರ್.‌13ರಂದು ಥಿಯೇಟರ್‌ನಲ್ಲಿ ಕಾಲ್ತುಳಿತ ಸಂಬಂಧ ಅಲ್ಲು ಅರ್ಜುನ್‌ರನ್ನು ಚಿಕ್ಕಡಪಲ್ಲಿ ಠಾಣೆ ಪೊಲೀಸರು ಬಂಧಿಸಿದ್ದರು. ಬೇಲ್‌ ಸಿಕ್ಕ ಹಿನ್ನೆಲೆ ನಟ ಅಲ್ಲು ಅರ್ಜುನ್‌ ರಿಲೀಸ್‌ ಆಗಿದ್ದರು. ನಿನ್ನೆ ಹೈದರಾಬಾದ್‌ನ ಚಿಕ್ಕಡಪಲ್ಲಿ ಪೊಲೀಸ್‌ ಠಾಣೆಯಲ್ಲಿ ನಟ ಅಲ್ಲು ಅರ್ಜುನ್‌ ಅವರನ್ನು ಸತತ 4 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು.

Tags:
error: Content is protected !!