ಶ್ರೀಹರಿಕೋಟಾ: ಇಸ್ರೋ PSLC-C61/EOS-09 ಕಾರ್ಯಾಚರಣೆಗೆ ಸಿದ್ಧತೆಗಳು ಅಂತಿಮ ಹಂತ ತಲುಪಿದ್ದು, ನಾಳೆ ಬೆಳಿಗ್ಗೆ 5.59ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋದ 101ನೇ ಉಡಾವಣೆ ನಡೆಯಲಿದೆ.
ನಾಳೆ ಬೆಳಿಗ್ಗೆ 5.59ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಪಗ್ರಹ ಉಡಾವಣೆ ನಿಗದಿಯಾಗಿದ್ದು, ಈ ಕುರಿತು ಇಸ್ರೋದ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಇದರ ನೇರ ಪ್ರಸಾರ ವೀಕ್ಷಿಸಬಹುದಾಗಿದೆ.
ಈ ಹಿನ್ನೆಲೆಯಲ್ಲಿ ಶುಕ್ರವಾರ ಇಸ್ರೋ ಅಧ್ಯಕ್ಷ ವಿ.ನಾರಾಯಣನ್ ತಿರುಪತಿ ತಿಮ್ಮಪ್ಪನ ಮೊರೆ ಹೋದರು. ದೂರ ಸಂವೇದಿ ಉಪಗ್ರಹ ಮಿಷನ್ ಆದ ಪೋಲಾರ್ ಸ್ಯಾಟ್‌ಲೈಟ್ ಲಾಂಚ್ ವೆಹಿಕಲ್ ಯಶಸ್ವಿ ಉಡಾವಣೆಗೆ ಅವರು ದೇವರ ಆಶೀರ್ವಾದ ಕೋರಿದರು.
ಪಿಎಸ್‌ಎಲ್‌ವಿ-ಸಿ61 ಮೂಲಕ ಉಡಾವಣೆಯಾಗುವ 101ನೇ ಮಿಷನ್ ಇಡ್ರೋಗೆ ಒಂದು ಪ್ರಮುಖ ಮೈಲಿಗಲ್ಲಾಗಿದೆ. ಭಾರತದ ಎಲ್ಲಾ ಹವಾಮಾನ ಭೂ ವೀಕ್ಷಣಾ ಸಾಮರ್ಥ್ಯ ಹೊಂದಿರುವ ಈ ಉಪಗ್ರಹವು ಬಾಹ್ಯಾಕಾಶ ಸಾಧನೆಗೆ ದೇಶದ ಬದ್ಧತೆಯನ್ನು ಇನ್ನಷ್ಟು ಬಲಪಡಿಸಲಿದೆ ಎಂದು ಇಸ್ರೋ ಅಧ್ಯಕ್ಷ ನಾರಾಯಣನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.





