ನವದೆಹಲಿ: ವಿಧಾನಸಭೆ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದ್ದು, ರಾಷ್ಟ್ರ ರಾಜಧಾನಿಯ ಚುನಾವಣಾ ಕಣದಲ್ಲಿ ಈ ಬಾರಿ ಗ್ಯಾರಂಟಿ ಯೋಜನೆಗಳು ಭಾರೀ ಸದ್ದು ಮಾಡಿವೆ.
ನೀರು, ಕರೆಂಟ್ ಫ್ರೀ ಕೊಟ್ಟಿದ್ದ ಆಪ್ ಇನ್ನೊಂದು ಹೆಜ್ಜೆ ಮುಂದೆ ಹೋದರೆ, ಕಾಂಗ್ರೆಸ್ ಕರ್ನಾಟಕದ ಯೋಜನೆಗಳನ್ನೇ ಚೂರು ಬದಲಿಸಿ ಪ್ರಕಟಿಸಿದೆ.
ಇನ್ನೂ ಗ್ಯಾರಂಟಿ ಯೋಜನೆಗಳನ್ನೇ ಟೀಕಿಸುತ್ತಾ ಬಂದಿದ್ದ ಬಿಜೆಪಿ ಕೂಡ ಈ ಬಾರಿ ಗ್ಯಾರಂಟಿ ಅಸ್ತ್ರದೊಂದಿಗೆ ಚುನಾವಣಾ ಅಖಾಡಕ್ಕೆ ಇಳಿದಿದೆ.
ಒಟ್ಟಿನಲ್ಲಿ ಈ ಬಾರಿ ದೆಹಲಿ ಚುನಾವಣಾ ಕಣ ಗ್ಯಾರಂಟಿಗಳಿಂದಲೇ ಸದ್ದು ಮಾಡುತ್ತಿದ್ದು, ಇಂದು ಮಧ್ಯಾಹ್ನ 12ರ ವೇಳೆಗೆ ದೆಹಲಿ ಗದ್ದುಗೆ ಹಿಡಿಯುವವರು ಯಾರು ಎಂದು ಗೊತ್ತಾಗಲಿದೆ.
ಇನ್ನು ಎಲ್ಲಾ ಸಮೀಕ್ಷೆಗಳು ಈ ಬಾರಿ ಬಿಜೆಪಿ ದೆಹಲಿ ಗದ್ದುಗೆ ಹಿಡಿಯಲಿದೆ ಎಂದು ಹೇಳಿದ್ದು, ಅರವಿಂದ್ ಕೇಜ್ರಿವಾಲ್‌ಗೆ ಆತಂಕ ಎದುರಾಗಿದೆ ಎನ್ನಲಾಗುತ್ತಿದೆ.





