Mysore
27
clear sky

Social Media

ಶನಿವಾರ, 31 ಜನವರಿ 2026
Light
Dark

ತಿರುಪತಿ ಕಾಲ್ತುಳಿತ ದುರಂತ: ಮೃತರ ಕುಟುಂಬಕ್ಕೆ 25ಲಕ್ಷ ಪರಿಹಾರ ಘೋಷಣೆ

ತಿರುಪತಿ: ತಿರುಪತಿ ದೇವಸ್ಥಾನದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟ 6 ಮಂದಿ ಭಕ್ತರ ಕುಟುಂಬಕ್ಕೆ ತಲಾ ರೂ.25 ಲಕ್ಷ ಪರಿಹಾರ ನೀಡುವುದಾಗಿ ಆಂಧ್ರಪ್ರದೇಶದ ಮುಜರಾಯಿ ಇಲಾಖೆ ಸಚಿವ ಅಂಗನಿ ಸತ್ಯ ಪ್ರಸಾದ್ ಹೇಳಿದ್ದಾರೆ.‌

ಘಟನೆ ನಿಜಕ್ಕೂ ದುಃಖ ತರಿಸಿದೆ. ಜೀವವನ್ನು ಮರಳಿ ತರಲಾಗದು, ಆದರೆ ನಾವು ಕುಟುಂಬಕ್ಕೆ ನೆರವಾಗಬಹುದು ಎಂದಿದ್ದಾರೆ.

ಘಟನೆಯಲ್ಲಿ 40 ಮಂದಿ ಗಾಯಾಳುಗಳಲ್ಲಿ 32 ಗಾಯಾಳುಗಳು ಚೇತರಿಸಿಕೊಂಡು ಮನೆಗೆ ತೆರಳಿದ್ದಾರೆ.

ದುರಂತಕ್ಕೆ ಸಿಎಂ ಚಂದ್ರಬಾಬು ನಾಯ್ಡು, ಸಚಿವರು ಸೇರಿದಂತೆ ಪ್ರಧಾನಿ ಮೋದಿ, ವಿಪಕ್ಷ ನಾಯಕ ರಾಹುಲ್‌ ಗಾಂಧಿ ಸಂತಾಪ ಸೂಚಿಸಿದ್ದಾರೆ.

 

Tags:
error: Content is protected !!