Mysore
26
scattered clouds

Social Media

ಬುಧವಾರ, 24 ಡಿಸೆಂಬರ್ 2025
Light
Dark

ತಿರುಪತಿ ಲಡ್ಡು ಪ್ರಸಾದ ವಿವಾದಕ್ಕೆ ಟ್ವಿಸ್ಟ್: ನಾಲ್ವರ ಬಂಧನ

ಅಮರಾವತಿ: ವಿಶ್ವವಿಖ್ಯಾತ ತಿರುಪತಿ ತಿಮ್ಮಪ್ಪನ ದೇಗುಲದ ಲಡ್ಡು ಪ್ರಸಾದದಲ್ಲಿ ಕಲಬೆರಕೆ ವಿವಾದಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ನಾಲ್ವರನ್ನು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಉತ್ತರಾಖಂಡದ ರೂರ್ಕಿಯ ಭೋಲೆ ಬಾಬಾ ಡೈರಿಯ ಮಾಜಿ ನಿರ್ದೇಶಕ ವಿಪಿನ್‌ ಜೈನ್‌, ಪೊಮಿಲ್‌ ಜೈನ್‌, ವೈಷ್ಣವಿ ಡೈರಿ ಸಿಇಓ ಅಪೂರ್ವ ವಿನಯ್‌ ಕಾಂತ್‌ ಚಾವ್ಹಾ, ದುಂಡಿಗಲ್‌ನ ಎಆರ್‌ ಡೈರಿ ಎಂಡಿ ರಾಜಶೇಖರನ್‌ ಎಂಬುವವರೇ ಬಂಧಿತ ಆರೋಪಿಗಳಾಗಿದ್ದಾರೆ.

ಟೆಂಡರ್‌ ಪಡೆಯುವ ಹಂತದಿಂದ ಪೂರೈಕೆ ತನಕ ನಿಯಮ ಉಲ್ಲಂಘಿಸಿದ ಆರೋಪದಡಿ ನಾಲ್ವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.

ಈ ಆರೋಪಿಗಳೆಲ್ಲಾ ತುಪ್ಪ ಪೂರೈಕೆಯ ನೆಪದಲ್ಲಿ ಅನೇಕ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ದೃಢವಾಗಿದೆ. ವೈಷ್ಣವಿ ಡೈರಿ ಮುಂದೆ ಎಆರ್‌ ಡೈರಿ ಹೆಸರಿರುವ ಸುಳ್ಳು ದಾಖಳೆಗಳು ಮತ್ತು ಸೀಲುಗಳನ್ನು ಬಳಸಿ ಟೆಂಡರ್‌ ಪಡೆದಿದೆ ಎನ್ನಲಾಗಿದೆ.

ಇದೆಲ್ಲದರ ಜೊತೆಗೆ ತುಪ್ಪ ಪೂರೈಕೆಯಲ್ಲಿಯೂ ವ್ಯತ್ಯಾಸ ನಡೆದಿರುವ ಕಾರಣಕ್ಕೆ ಸಿಬಿಐ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿದ್ದಾರೆ.

Tags:
error: Content is protected !!