Mysore
26
broken clouds

Social Media

ಸೋಮವಾರ, 13 ಏಪ್ರಿಲ 2026
Light
Dark

ಇದು ಯುವಶಕ್ತಿ ಬಜೆಟ್‌: ನಿರ್ಮಲಾ ಸೀತಾರಾಮನ್‌

ನವದೆಹಲಿ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಂದು 2026-27ನೇ ಸಾಲಿನ ಕೇಂದ್ರ ಬಜೆಟ್‌ ಮಂಡನೆ ಮಾಡಿದರು.

9ನೇ ಬಾರಿಗೆ ಬಜೆಟ್‌ ಮಂಡಿಸಿದ ನಿರ್ಮಲಾ ಸೀತಾರಾಮನ್‌ ಅವರು, ಮಾಘ ಪೂರ್ಣಿಮೆಯ ದಿನ ಬಜೆಟ್‌ ಮಂಡಿಸುತ್ತಿದ್ದೇನೆ. ರವಿದಾಸ್‌ ಅವರ ಜನ್ಮದಿನಾಚರಣೆ ದಿನ ಬಜೆಟ್‌ ಮಂಡನೆಯಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಇದು ಜನಸಾಮಾನ್ಯರ ಬಜೆಟ್‌ ಆಗಿದೆ. ಎಲ್ಲಾ ವರ್ಗದವರಿಗೆ ಬಜೆಟ್‌ ತಯಾರಿಸಲಾಗಿದೆ. ಕೇಂದ್ರ ಸರ್ಕಾರ ಐತಿಹಾಸಿಕ ನಿರ್ಣಯಗಳನ್ನು ತೆಗೆದುಕೊಂಡಿದೆ. ಎಲ್ಲಾ ಕುಟುಂಬಗಳಿಗೂ ಹೆಚ್ಚಿನ ಹಣ ಸಿಗುವ ಭರವಸೆ. ವಿಕಸಿತ ಭಾರತದತ್ತ ಹೆಜ್ಜೆ ಇಟ್ಟಿದ್ದೇವೆ. ಬಡತನ ನಿರ್ಮೂಲನೆ ಮಾಡಲು ಗುರಿ ಹೊಂದಿದ್ದೇವೆ. 2047ರ ವೇಳೆಗೆ ಭಾರತ ಜಗತ್ತಿನ ನಂಬರ್‌ ಒನ್‌ ಅರ್ಥವ್ಯವಸ್ಥೆಯಾಗಲಿದೆ. ಇದು ಯುವಶಕ್ತಿ ಬಜೆಟ್‌ ಆಗಲಿದೆ ಎಂದು ಹೇಳಿದರು.

Tags:
error: Content is protected !!