Mysore
27
scattered clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಅಲ್ಲು ಅರ್ಜುನ್‌ಗೆ ಬಿಗ್‌ ರಿಲೀಫ್‌ ನೀಡಿದ ತೆಲಂಗಾಣ ಹೈಕೋರ್ಟ್‌

ತೆಲಂಗಾಣ: ನಟ ಅಲ್ಲು ಅರ್ಜುನ್‌ಗೆ ತೆಲಂಗಾಣ ಹೈಕೋರ್ಟ್‌ ಮಧ್ಯಂತರ ಜಾಮೀನು ನೀಡಿ ಬಿಗ್‌ ರಿಲೀಫ್‌ ನೀಡಿದೆ.

ಕಾಲ್ತುಳಿತದಿಂದ ಮಹಿಳೆ ಸಾವು ಪ್ರಕರಣದಲ್ಲಿ ಇಂದು(ಡಿ.13) ನಟ ಅಲ್ಲು ಅರ್ಜುನ್‌ ಅವರನ್ನು ಪೊಲೀಸರು ಬಂಧಿಸಿ ನಾಂಪಲ್ಲಿ ಹೈಕೋರ್ಟ್‌ಗೆ ಹಾಜರುಪಡಿಸಿದ್ದರು. ಆ ವೇಳೆ ಅಲ್ಲು ಅರ್ಜುನ್‌ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರಿಸುವಂತೆ ಆದೇಶ ನೀಡಿತ್ತು.

ನಾಂಪಲ್ಲಿ ಕೋರ್ಟ್‌ನ ನ್ಯಾಯಾಂಗ ಬಂಧನ ಆದೇಶವನ್ನು ಪ್ರಶ್ನಿಸಿ ಅಲ್ಲು ಅರ್ಜುನ್‌ ಪರ ವಕೀಲ ಅರ್ನಬ್‌ ಗೋಸ್ವಾಮಿ ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿ ವಾದ-ವಿವಾದಗಳನ್ನು ಆಲಿಸಿದ ಬಳಿಕ ತೆಲಂಗಾಣ ಹೈಕೋರ್ಟ್‌ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಈಗಾಗಲೇ ಅಲ್ಲು ಅರ್ಜುನ್‌ ನ್ಯಾಯಾಂಗ ಬಂಧನದಲ್ಲಿರುವ ಕಾರಣ ಜೈಲು ಸೂಪರಿಂಡೆಂಟ್‌ಗೆ ಬಾಂಡ್‌ಗಳನ್ನು ನೀಡಿ ಬಿಡುಗಡೆ ಆಗಬಹುದು ಎಂದು ಆದೇಶವನ್ನು ಹೊರಡಿಸಿದೆ.

Tags: