Mysore
29
overcast clouds

Social Media

ಬುಧವಾರ, 08 ಏಪ್ರಿಲ 2026
Light
Dark

ಮುಂದಿನ 2-3 ವಾರಗಳಲ್ಲಿ ಯುದ್ಧ ಅಂತ್ಯ: ಡೊನಾಲ್ಡ್ ಟ್ರಂಪ್‌

ವಾಷಿಂಗ್ಟನ್:‌ ಮುಂದಿನ ಎರಡು ಅಥವಾ ಮೂರು ವಾರಗಳಲ್ಲಿ ಇರಾನ್‌ ವಿರುದ್ಧದ ಯುದ್ಧ ಅಂತ್ಯಗೊಳ್ಳಲಿದೆ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು, ನಾವು ಬೇಗನೇ ಇರಾನ್‌ ಬಿಟ್ಟು ಹೋಗಬೇಕಿದೆ. ಇರಾನ್‌ನಲ್ಲಿ ಕಾರ್ಯಾಚರಣೆಯನ್ನು ಶೀಘ್ರವೇ ಕೊನೆಗೊಳಿಸಲಾಗುವುದು. ಇರಾನ್‌ ಸೋಲಿನ ಸನಿಹದಲ್ಲಿದೆ ಎಂದು ಹೇಳಿದರು.

ಒಂದು ವೇಳೆ ರಾಜತಾಂತ್ರಿಕವಾಗಿ ಪರಿಹಾರ ದೊರಕಿದರೆ ಯುದ್ಧ ಇನ್ನೂ ಬೇಗನೇ ಕೊನೆಗೊಳ್ಳಬಹುದು. ಅವರು ಸಹ ಒಪ್ಪಂದ ಮಾಡಿಕೊಳ್ಳಲು ಬಯಸುತ್ತಿದ್ದಾರೆ. ನಮಗಿಂತಲೂ ಹೆಚ್ಚಾಗಿ ಅವರೇ ಬಯಸುತ್ತಿದ್ದಾರೆ ಎಂದಿದ್ದಾರೆ.

 

Tags:
error: Content is protected !!