ನವದೆಹಲಿ: ಮಂಗಳವಾರ(ಜೂನ್.೪) ಲೋಕಸಭಾ ಚುನಾವಣೆ ಫಲಿತಾಂಶದ ವೇಳೆ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿತ್ತು. ಅಂದು ಬೆಳಿಗ್ಗೆಯಿಂದಲೇ ಷೇರು ಸೂಚ್ಯಂಕದಲ್ಲಿ ಭಾರಿ ಕುಸಿತ ಕಂಡಿದ್ದು, ಹೂಡಿಕೆದಾರರು ಭಾರಿ ನಷ್ಟ ಅನುಭವಿಸಿದ್ದಾರೆ.
ನಿನ್ನೆ(ಜೂನ್.4) ಒಂದೇ ದಿನ 30 ಲಕ್ಷಕೋಟಿ ರೂ ನಷ್ಟಗಳನ್ನು ಹೂಡಿಕೆದಾರರು ಅನುಭವಿಸಿದ್ದಾರೆ. ಇದರಿಂದ ಅಕ್ಷರಶಃ ಷೇರುಮಾರುಕಟ್ಟೆ ಕೆಂಪು ಬಣ್ಣಕ್ಕೆ ತಿರಗಿತ್ತು. ಚನಾವಣಾ ಎಕ್ಸಿಟ್ ಪೋಲ್ ಫಲಿತಾಂಶ ಬಂದ ಸೋಮವಾರದವರೆಗೂ ಎದೆಯುಬ್ಬಿಸುತ್ತಿದ್ದ ಅದಾನಿ ಗ್ರೂಪ್ ಸ್ಟಾಕ್‌ಗಳಿಗೆ ಹಾಗೂ ಹೊಸ ಆಸೆಯಲ್ಲಿ ಅದಾನಿ ಷೇರು ಕೊಂಡವರಿಗೆ ನಿನ್ನೆ ಆಘಾತ ಉಂಟಾಗಿತ್ತು.
ಸೋಮವಾರ ಷೇರು ಮಾರುಕಟ್ಟೆ ನಾಗಲೋಟ ಕಂಡಿತ್ತು. ಮಂಗಳವಾರದ ವಹಿವಾಟಿನಲ್ಲಿ ಕರಡಿ ಕುಣಿತು ಚೋರಾಯಿತು. ಪರಿಣಾಮ ಸಾರ್ವಜನಿಕ ವಲಯದ ಕಂಪನಿಗಳು, ಬ್ಯಾಂಕ್‌ಗಳು, ವಿದ್ಯುತ್, ಯುಟಿಲಿಟಿ, ತೈಲ ಮತ್ತು ಅನಿಲ, ಬಂಡವಾಳ ಸರಕು ಸೂಚ್ಯಂಕದ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದ್ದವು.
ಎಕ್ಸಿಟ್ ಪೋಲ್‌ನಲ್ಲಿ ಎನ್‌ಡಿಎ ಸಂಪೂರ್ಣ ಬಹುಮತ ಬರುತ್ತದೆ ಎಂದು ಹೇಳಿದ ಬಳಿಕ ಷೇರು ಮಾರುಕಟ್ಟೆಯಲ್ಲಿ ಭರ್ಜರಿ ಏರಿಕೆ ಕಂಡಿತ್ತು. ಆದರೆ ಫಲಿತಾಂಧ ಎಕ್ಸಿಟ್ ಪೋಲ್ ಅಂಕಿ ಅಂಶಗಳಿಗಿಂತ ಭಿನ್ನವಾಗಿದ್ದು ಷೇರು ಮಾರುಕಟ್ಟೆಯಲ್ಲಿ ಕುಸಿತಕ್ಕೆ ಕಾರಣವಾಯಿತು.
ಚೇತರಿಸಿಕೊಂಡ ಷೇರುಪೇಟೆ
ಇಂದು(ಜೂನ್ ೫) ಆರಂಭದಲ್ಲಿ ಮಂಕಾಗಿಯೇ ಇದ್ದ ಷೇರುಪೇಟೆ ಮಧ್ಯಾಹ್ನದ ಹೊತ್ತಿಗೆ ಮತ್ತೆ ಸಕಾರಾತ್ಮಕವಾಗಿ ತಿರುಗಿದ್ದು, ಒಂದೊಂದೇ ಷೇರುಗಳು ಹಸಿರು ಬಣ್ಣಕ್ಕೆ ತಿರುಗುತ್ತಿವೆ.