ನವದೆಹಲಿ: ಲೋಕಸಭಾ ಸಂಸತ್‌ನಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಶಿವನ ಚಿತ್ರ ಪ್ರದರ್ಶಿಸಿದ್ದಕ್ಕೆ ಸ್ಪೀಕರ್ ಓಂ ಬಿರ್ಲಾ ಆಕ್ಷೇಪಿಸಿದ್ದಾರೆ.
ಸೋಮವಾರ(ಜು.1) ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡಿದ ರಾಹುಲ್ ಗಾಂಧಿ, ಶಿವನ ಚಿತ್ರ ಪ್ರದರ್ಶಿಸಿ, ಹಿಂದು ಧರ್ಮ ದ್ವೇಷ ಮತ್ತು ಭೀತಿ ಹರಡುಲು ಸಾಧ್ಯವಿಲ್ಲ, ಆದರೆ ಬಿಜೆಪಿಗರು ಅದನ್ನೇ ಮಾಡುತ್ತಿದ್ದಾರೆ ಎಂದು ಹೇಳಿದರು.
ಎಲ್ಲಾ ಧರ್ಮಗಳೂ ಧೈರ್ಯದ ಬಗ್ಗೆ ಹೇಳುತ್ತವೆ. ಇಸ್ಲಾಂ ಮತ್ತು ಸಿಖ್ ಧರ್ಮ ಕೂಡ ನಾವು ನಿರ್ಭೀತಿಯಿಂದಿರಬೇಕು ಎಂದು ಹೇಳಿವೆ. ಮಹಾನ್ ವ್ಯಕ್ತಿಗಳೆಲ್ಲಾ ಅಹಿಂದೆ ಬಗ್ಗೆ ಮಾತನಾಡಿದ್ದಾರೆ. ಆದರೆ ತಮ್ಮನ್ನು ತಾವು ಹಿಂದುಗಳೆಂದು ಕರೆದುಕೊಳ್ಳುವವರು ಹಿಂಸೆ , ದ್ವೇಷ ಮತ್ತು ಸುಳ್ಳಿನ ಬಗ್ಗೆ ಮಾತನಾಡುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿದರು.
ಈ ವೇಳೆ ಭಾಷಣ ಮಧ್ಯ ಶಿವನ ಚಿತ್ರ ಪ್ರದರ್ಶಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸ್ಪೀಕರ್, ಭಿತ್ತಿಪತ್ರಗಳ ಪ್ರದರ್ಶನಕ್ಕೆ ನಿಯಮ ಅನುಮತಿಸುವುದಿಲ್ಲ ಎಂದಿದ್ದಾರೆ.