Mysore
27
overcast clouds

Social Media

ಸೋಮವಾರ, 08 ಡಿಸೆಂಬರ್ 2025
Light
Dark

ವೈದ್ಯೆ ಪ್ರಕರಣಕ್ಕೆ ತಲೆತಂಡ? ರಾಜೀನಾಮೆಗೆ ಸಿಎಂ ಮಮತ ಇಂಗಿತ

ಕೋಲ್ಕತ್ತ: ಆರ್‌ಜಿಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ದೊಡ್ಡ ಹೇಳಿಕೆಯನ್ನು ನೀಡಿದ್ದಾರೆ. ನಾನು ಪಶ್ಚಿಮ ಬಂಗಾಳದ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ. ನನಗೆ ಹುದ್ದೆಯ ಬಗ್ಗೆ ಕಾಳಜಿ ಇಲ್ಲ. ನನಗೆ ನ್ಯಾಯ ಬೇಕು. ನ್ಯಾಯ ಸಿಗುವ ಬಗ್ಗೆ ಮಾತ್ರ ಕಾಳಜಿ ಇದೆ ಎಂದು ಹೇಳಿದ್ದಾರೆ.

ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಖಂಡಿಸಿ ಕಿರಿಯ ವೈದ್ಯರಯ ನಡೆಸುತ್ತಿರುವ ಮುಷ್ಕರವನ್ನು ಹಿಂಪಡೆಯುವಂತೆ ಮನವೊಲಿಸುವ ಭಾಗವಾಗಿ ಕರೆದಿದ್ದ ಸಭೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ಸಭೆಯ ನೇರ ಪ್ರಸಾರ ಮಾಡದ ಹೊರತು ಚರ್ಚೆಗೆ ಸಿದ್ಧರಿಲ್ಲ ಎಂದು ಮುಷ್ಕರ ನಿರತ ಕಿರಿಯ ವೈದ್ಯರು ಪಟ್ಟು ಹಿಡಿದರು. ಇದರಿಂದಾಗಿ ಮಮತ ಬ್ಯಾನರ್ಜಿ ಅವರು ಸುಮಾರು ಎರಡು ಗಂಟೆಗಳ ಕಾಲ ಸಭಾಂಗಣದಲ್ಲಿ ಕಾದರು.

ನನಗೆ ಸಿಎಂ ಕುರ್ಜಿ ಬೇಡ
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2ಗಂಟೆ ಕಾಲ ಕಾದರೂ ವೈದ್ಯರು ಬರಲಿಲ್ಲ. ಜನರು ನ್ಯಾಯಾವನ್ನು ಬಯಸಿದರೆ, ಜನರ ಹಿತಾಸಕ್ತಿಗಾಗಿ ನಾನು ರಾಜೀನಾಮೆ ನೀಡಲು ಸಿದ್ಧನಿದ್ದೇನೆ. ನನಗೆ ಸಿಎಂ ಕುರ್ಚಿ ಬೇಡ ಎಂದರು.

ಎಲ್ಲರೂ ಇಲ್ಲಿದ್ದರು… ಅವರೇ ಬರಲಿಲ್ಲ
ವೈದ್ಯರನ್ನು ಭೇಟಿ ಮಾಡಲು ನಾವು ಎರಡು ಗಂಟೆಗಳ ಕಾಲ ಕಾಯುತ್ತಿದ್ದೇವೆ. ನಾವು ಅವರಿಗೆ ಪತ್ರ ಬರೆದಿದ್ದೇವೆ. ಅವರು ಕೂಡ ಬರುತ್ತೇವೆ ಎಂದಿದ್ದರು. ಅದಕ್ಕಾಗಿಯೇ ನಾವು ಈ ವ್ಯವಸ್ಥೆ ಮಾಡಿದೆವು. ನಾವು ಮುಕ್ತ ಮನಸ್ಸಿನಿಂದ ಚರ್ಚೆ ನಡೆಸಲು ಬಯಸಿದ್ದೇವೆ. ಸರ್ಕಾರದ ಚೀಫ್‌ ಸೆಕ್ರಟರಿ, ಪೊಲೀಸ್‌ ಮಹಾ ನಿರ್ದೇಶಕರು, ಗೃಹ ಕಾರ್ಯದರ್ಶಿ ಎಲ್ಲರೂ ಇಲ್ಲಿದ್ದರು…. ಆದರೆ, ಅವರೇ ಬರಲಿಲ್ಲ ಎಂದು ಹೇಳಿದರು.

ಪ್ರಕರಣ ʻಸುಪ್ರೀಂʼನಲ್ಲಿರುವುದರಿಂದ ಸಭೆಯ ನೇರ ಪ್ರಸಾರ ಅಸಾಧ್ಯ
ನಾಟಕೀಯ ಬೆಳವಣಿಗೆಯಲ್ಲಿ ಕಿರಿಯ ವೈದ್ಯರು ಸಚಿವಾಲಯದ ಗೇಟ್‌ ಬಳಿ ಬಂದರು. ರಾಜ್ಯ ಸರ್ಕಾರದೊಂದಿಗೆ ಸಭೆಯ ನೇರ ಪ್ರಸಾರಕ್ಕೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದರು. ಆದರೆ, ಈ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿರುವುದರಿಂದ ಸಭೆಯಲ್ಲಿ ನಡೆಯುವ ಚರ್ಚೆರ ನೇರ ಪ್ರಸಾರ ಅಸಾಧ್ಯ ಎಂದು ದೀದಿ ಹೇಳಿದರು.

ಸದು ರಾಜ್ಯದಲ್ಲಿ ನಡೆಯುತ್ತಿರುವ ವೈದ್ಯರ ಮಷ್ಕರದಿಂದಾಗಿ 27ಮಂದಿ ಮೃತಪಟ್ಟು,7 ಲಕ್ಷಕ್ಕೂ ಹೆಚ್ಚು ಮಂದಿ ಅನಾರೋಗ್ಯದಿಂದ ಪರದಾಡುತ್ತಿದ್ದಾರೆ ಎಂದು ವರದಿಯಾಗಿದೆ.

Tags:
error: Content is protected !!