Mysore
20
broken clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಹಿಂದಿಯಲ್ಲೂ ಬಿಡುಗಡೆಗೊಳ್ಳಲಿದೆ‌ ಚಿನ್ನದ ಕಥೆ ʻತಂಗಳಾನ್ʼ

ಮೈಸೂರು: ಇತ್ತೀಚೆಗಷ್ಟೆ ಬಿಡುಗಡೆಗೊಂಡ ತಮಿಳು ಸಿನಿಮಾ ತಂಗಳಾನ್‌ ಉತ್ತಮ ವಿಮರ್ಶೆಗೆ ಒಳಪಟ್ಟಿದೆ. ಅಷ್ಟೆ ಅಲ್ಲದೇ, ಬಾಕ್ಸ್‌ ಆಫೀಸ್‌ನಲ್ಲಿ ತನ್ನ ಗಳಿಕೆಯನ್ನು ಸಹ ಹೆಚ್ಚಿಸಿಕೊಂಡಿದೆ.

ತಮಿಳಿನ ಜನಪ್ರಿಯ ನಿರ್ದೇಶಕ ಹಾಗೂ ಅಂಬೇಡ್ಕರ್‌ವಾದಿ ಪಾ.ರಂಜಿತ್‌ ನಿರ್ದೇಶನದ ಸಿನಿಮಾವಾದ ತಂಗಳಾನ್‌ನಲ್ಲಿ ಚಿಯಾನ್‌ ವಿಕ್ರಂ, ಪಾರ್ವತಿ ಮೆನನ್‌ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ. ಚಿನ್ನದ ಗಣಿಯ ಕತೆಯನ್ನು ಒಳಗೊಂಡಿರುವ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಹೊತ್ತಿನಲ್ಲಿ ಸಿನಿಮಾಕ್ಕೆ ಉತ್ತರ ಭಾರತದಿಂದಲೂ ಬೇಡಿಕೆ ಬಂದಿದ್ದು, ಸಿನಿಮಾ ಇದೀಗ ಹಿಂದಿಯಲ್ಲಿ ಬಿಡುಗಡೆ ಆಗುತ್ತಿದೆ.

ತಂಗಳಾನ್‌ ಆಗಸ್ಟ್‌ 15 ರಂದು ತಮಿಳು, ಮಲಯಾಳಂ ಹಾಗೂ ತೆಲುಗು ಭಾಷೆಯಲ್ಲಿ ಬಿಡುಗಡೆ ಆಗಿತ್ತು. ಇದೀಗ ದಕ್ಷಿಣ ಭಾರತದಲ್ಲಿ ಉತ್ತಮ ಪ್ರದರ್ಶನ ಕಂಡ ತಂಗಲಾನ್‌ ಸಿನಿಮಾಕ್ಕೆ ಉತ್ತರ ಭಾರತದಲ್ಲೂ ಬಹು ಬೇಡಿಕೆ ಹುಟ್ಟಿಕೊಂಡಿದೆ. ಈ ಕಾರಣ ಸಿನಿಮಾವನ್ನು ಹಿಂದಿಗೆ ಡಬ್‌ ಮಾಡಿ ಉತ್ತರ ಭಾರತದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ. ಇದೇ ತಿಂಗಳೂ ಆಗಸ್ಟ್‌ 30 ರಂದು ತಂಗಲಾನ್‌ ಸಿನಿಮಾದ ಹಿಂದಿ ಆವೃತ್ತಿ ಉತ್ತರ ಭಾರತದ ಪ್ರಮುಖ ನಗರಗಳಲ್ಲಿ ಬಿಡುಗಡೆಯಾಗಲಿದೆ.

Tags: