Mysore
15
clear sky

Social Media

ಭಾನುವಾರ, 14 ಡಿಸೆಂಬರ್ 2025
Light
Dark

ಆಪರೇಷನ್‌ ಮಹಾದೇವ್‌ ಮೂಲಕ ಪಹಲ್ಗಾಮ್‌ ದಾಳಿಯ ಮೂವರು ಉಗ್ರರ ಹತ್ಯೆ: ಅಮಿತ್‌ ಶಾ ಸ್ಪಷ್ಟನೆ

ನವದೆಹಲಿ: ಆಪರೇಷನ್‌ ಮಹಾದೇವ್‌ ಮೂಲಕ ಪಹಲ್ಗಾಮ್‌ ದಾಳಿಯ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸ್ಪಷ್ಟಪಡಿಸಿದ್ದಾರೆ.

ಜಮ್ಮು-ಕಾಶ್ಮೀರದ ಶ್ರೀನಗರದ ಡಚಿಗಮ್‌ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ ಸುಲೇಮಾನ್‌ ಶಾ ಅಲಿಯಾಸ್‌ ಹಾಶಿಮ್‌ ಮೂಸಾ ಹಾಗೂ ಇತರೆ ಇಬ್ಬರು ಏಪ್ರಿಲ್.‌22ರಂದು ನಡೆದ ಪಹಲ್ಗಾಮ್‌ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದರು.

ಈ ಮೂವರನ್ನು ನಮ್ಮ ಸೇನೆ ಎನ್‌ಕೌಂಟರ್‌ ಮಾಡಿದೆ ಎಂದು ಲೋಕಸಭೆಯಲ್ಲಿ ಇಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆಪರೇಷನ್‌ ಸಿಂಧೂರ್‌ ಬಗ್ಗೆ ಚರ್ಚೆ ನಡೆಸಿದರು.

ಇನ್ನು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ಮುಂದುವರಿಸಿದ ಅವರು, ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆಯನ್ನು ವಿಪಕ್ಷಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಭಾರತಕ್ಕೆ ಉಗ್ರರು ಬಂದ ಸಾಕ್ಷ್ಯ ಇಲ್ಲ ಎಂದು ಚಿದಂಬರಂ ಹೇಳಿದ್ದರು. ಆದರೆ ನಾವು ಹೊಡೆದುರುಳಿಸಿರುವುದು ಪಾಕ್‌ ಉಗ್ರರನ್ನೇ ಎಂದು ಸ್ಪಷ್ಟನೆ ನೀಡಿ ವಾಗ್ದಾಳಿ ನಡೆಸಿದರು.

Tags:
error: Content is protected !!