Mysore
24
haze

Social Media

ಸೋಮವಾರ, 16 ಫೆಬ್ರವರಿ 2026
Light
Dark

ತೆಲಂಗಾಣ: ಸಿಪಿಐ ಸಂಘಟನೆಯ 14 ಸದಸ್ಯರು ಪೊಲೀಸರ ಮುಂದೆ ಶರಣು

ಹೈದರಾಬಾದ್‌: ಶಾಂತಿಯುತ ಜೀವನ ನಡೆಸಲು ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯ 14 ಸದಸ್ಯರು ಇಂದು (ಸೋಮವಾರ) ಪೊಲೀಸರ ಮುಂದೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತೆಲಂಗಾಣದ ಭದ್ರಾದ್ರಿ ಕೊಥಗುಡೆಮ್‌ ಜಿಲ್ಲೆಯಲ್ಲಿ ಪೊಲೀಸ್‌ ವರಿಷ್ಠಾಧಿಕಾರಿ ಬಿ.ರೋಹಿತ್‌ ರಾಜು ಅವರ ಮುಂದೆ ಮಾವೋವಾದಿಗಳು ಶರಣಾಗಿದ್ದಾರೆ ಎಂದು ಪೊಲೀಸ್‌ ಪ್ರಕಟಣೆ ತಿಳಿಸಿದೆ.

ʼಆಪರೇಷನ್‌ ಚೆಯುತʼ ಮೂಲಕ ಬುಡಕಟ್ಟು ಜನರು ಹಾಗೂ ಶರಣಾದ ಮಾವೋವಾದಿಗಳಿಗೆ ಘೋಷಿಸಲಾದ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ತಿಳಿದ ನಂತರ ತಮ್ಮ ಕುಟುಂಬದೊಂದಿಗೆ ನೆಮ್ಮದಿಯ ಜೀವನ ನಡೆಸಲು ಮಾವೋವಾದಿಗಳು ಶರಣಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಳೇದ ಎರಡು ತಿಂಗಳಿಂದ 44 ಮಾವೋವಾದಿಗಳು ಪೊಲೀಶರ ಮುಂದೆ ಶರಣಾಗಿದ್ದಾರೆ ಎಂದು ತಿಳಿಸಿದೆ.

 

Tags:
error: Content is protected !!