ಚೆನ್ನೈ: ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದು, ಮತ್ತೆ ಸುದ್ದಿಯಲ್ಲಿದ್ದಾರೆ.
ಡಿಎಂಕೆ ಪಕ್ಷದ ಇತಿಹಾಸದಲ್ಲೇ ಮೊದಲು ಎಂಬಂತೆ ಡಿಸಿಎಂ ಉದಯನಿಧಿ ಸ್ಟಾಲಿನ್ ಅವರು ದೀಪಾವಳಿಯ ಶುಭ ಕೋರಿದ್ದಾರೆ.
ಇದುವರೆಗೂ ಡಿಎಂಕೆ ಪಕ್ಷದಲ್ಲಿ ಯಾರೂ ಕೂಡ ಹಬ್ಬದ ಶುಭಾಶಯ ಕೋರಿರಲಿಲ್ಲ. ಡಿಎಂಕೆ ನಾಯಕರು ಕರುಣಾನಿಧಿ ಆರಂಭಿಸಿದ್ದ ಎಲ್ಲಾ ನಿಯಮಗಳನ್ನು ಚಾಚು ತಪ್ಪದೇ ಪಾಲಿಸಿಕೊಂಡು ಬಂದಿದ್ದರು. ಆದರೆ ಈ ಸಂಪ್ರದಾಯವನ್ನು ಉದಯನಿಧಿ ಸ್ಟಾಲಿನ್ ಮುರಿದು ಹಾಕಿದ್ದಾರೆ.
ಹಬ್ಬದ ಶುಭಾಶಯ ಕೋರುವುದರಲ್ಲೂ ವ್ಯಂಗ್ಯವಾಡಿರುವ ಉದಯನಿಧಿ ಅವರು, ನಂಬಿಕೆ ಹೊಂದಿರುವವರಿಗೆ ದೀಪಾವಳಿ ಹಬ್ಬದ ಶುಭಾಶಯಗಳು ಎಂದು ಹೇಳಿದ್ದು, ಬಿಜೆಪಿಯ ಕಾಲೆಳೆದಿದ್ದಾರೆ.
ಉದಯನಿಧಿ ಸ್ಟಾಲಿನ್ ಹೇಳಿಕೆಗೆ ವಿರೋಧ ಪಕ್ಷ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದೆ.





