ನವದೆಹಲಿ: ಕರ್ನಾಟಕದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಈ ನಡುವೆ ತಮಿಳುನಾಡು ಕಾವೇರಿ ನೀರು ವಿಚಾರದಲ್ಲಿ ಮತ್ತೆ ಖ್ಯಾತೆ ತೆಗೆದಿದ್ದು, ತಮ್ಮ ಪಾಲಿನ ನೀರು ಬಿಡುವಂತೆ ಒತ್ತಾಯಿಸಿದೆ.
ಇಂದು (ಏ.30) ರಂದು ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯಲ್ಲಿ ಈ ಬಗ್ಗೆ ತಮಿಳುನಾಡು ಒತ್ತಾಯಿಸಿದ್ದು, ತಮ್ಮ ತಿಂಗಳ ಪಾಲಿನ ನೀರು 2.5 ಟಿಎಂಸಿ ನೀರನ್ನು ಬಿಡುಗಡೆ ಮಾಡುವಂತೆ ಹೇಳಿದೆ.
ಕರ್ನಾಟಕ ಕುಡಿಯುವ ನೀರಿ ನೆಪವೊಡ್ಡಿ ನಮಗೆ ನೀರು ನಿರಾಕರಿಸಿದೆ ಎಂದ ತಮಿಳುನಾಡು ಸರ್ಕಾರದ ವಾದಕ್ಕೆ ತೀವ್ರ ವೀರೋಧ ಮಾಡಿದ ಕರ್ನಾಟಕ, ರಾಜ್ಯದಲ್ಲಿ ಭೀಕರ ಬರವಿದೆ. ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿದೆ. ರಾಜ್ಯದ ಜಲಾಶಯಗಳನ್ನು ನೀರಿಲ್ಲವೆಂದು ಪ್ರತಿಕ್ರಿಯಿಸಿದೆ.
ಕರ್ನಾಟಕ-ತಮಿಳುನಾಡು ವಾದ ಆಲಿಸಿದ ಕಾವೇರಿ ನೀರು ನಿಯಂತ್ರಣ ಸಮಿತಿಯು ಮೇ 16 ಕ್ಕೆ ಮತ್ತೊಂದು ಸುತ್ತಿನ ಸಭೆ ನಡೆಸಲು ತೀರ್ಮಾನ ಮಾಡಿದೆ. ಜೊತೆಗೆ ಮೇ ತಿಂಗಳ ಕೊನೆ ವಾರದಲಿ ಸಿಡಬ್ಲೂಎಂಎ ಸಭೆ ನಡೆಸಲಿದೆ.