ಹೊಸದಿಲ್ಲಿ: ತಬಲಾ ಮಾಂತ್ರಿಕ ಹಾಗೂ ಗ್ರಾಮ್ಮಿ ಪ್ರಶಸ್ತಿ ವಿಜೇತ ಜಾಕೀರ್ ಹುಸೇನ್(73) ಅವರು ಹೃದಯ ಸಂಬಂಧಿ ಅನಾರೋಗ್ಯದಿಂದ ಇಂದು(ಡಿ.15) ನಿಧನರಾಗಿದ್ದಾರೆ.
ಜಾಕೀರ್ ಹುಸೇನ್ ಅವರು ಕಳೆದ ಎರಡು ವಾರಗಳಿಂದ ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಆರು ದಶಕಗಳ ಕಾಲದ ಅವರ ವೃತ್ತಿಜೀವನದಲ್ಲಿ ಜಾಕೀರ್ ಹಲವಾರು ಹೆಸರಾಂತ ಅಂತಾರಾಷ್ಟ್ರೀಯ ಮತ್ತು ಭಾರತೀಯ ಕಲಾವಿದರೊಂದಿಗೆ ಸಾಥ್ ನೀಡಿದ್ದಾರೆ.
1988ರಲ್ಲಿ ಪದ್ಮ ಶ್ರಿ, 2002ರಲ್ಲಿ ಪದ್ಮಭೂಷಣ ಮತ್ತು 2023ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗೆ ಜಾಕೀರ್ ಹುಸೇನ್ ಭಾಜನರಾಗಿದ್ದರು.
1951 ಮಾರ್ಚ್ 9 ರಂದು ಮುಂಬೈನಲ್ಲಿ ಜನಿಸಿದ್ದ ಜಾಕೀರ್, ನೃತ್ಯಗಾರ್ತಿ ಮಿನ್ನೆಕೋಲ ಅವರನ್ನು ವಿವಾಹವಾಗಿದ್ದರು. ಅನಿಸಾ ಖುರೇಷಿ ಮತ್ತು ಇಸಾಬೆಲ್ಲಾ ಖುರೇಷಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.