ನವದೆಹಲಿ: ನೀಟ್ ಯುಜಿ-2024ರ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷೆಯಲ್ಲಿನ ಅಕ್ರಮಗಳ ಆರೋಪ ಕುರಿತು ಸಿಬಿಐ ತನಿಖೆ ಕೋರಿ ಸಲ್ಲಿಸಿದ ಮನವಿಯನ್ನು ಸರ್ವೋಚ್ಛ ನ್ಯಾಯಾಲಯ ಶುಕ್ರವಾರ (ಜೂನ್.14) ಅಂಗೀಕರಿಸಿದೆ. ಜತೆಗೆ ಕೇಂದ್ರ ಸರ್ಕಾರ ಹಾಗೂ ಎನ್‌ಟಿಎ (ರಾಷ್ಟ್ರೀಯ ಪರೀಕ್ಷಾ ಸಂಸ್ಥೆ)ಗೆ ನೋಟಿಸ್ ಜಾರಿ ಮಾಡಿದೆ.
ಇದೇ ಮೇ 5ರಂದು ನಡೆದ ಯುಜಿ ನೀಟ್ ಪರೀಕ್ಷೆಯಲ್ಲಿ 60 ಕ್ಕೂ ಹೆಚ್ಚು ವಿದಾರ್ಥಿಗಳು ಮೊದಲ ರ್ಯಾಂಕ್ ಪಡೆದಿದ್ದರು ಈಪೈಕಿ ಒಟ್ಟು ಆರು ಜನ ವಿದ್ಯಾರ್ಥಗಳು ಒಂದೇ ಕೇಂದ್ರದಿಂದ ಪರೀಕ್ಷೆಯನ್ನು ಎದುರಿಸಿದ್ದು, ಎಲ್ಲರೂ ಮೊದಲ ರ್ಯಾಂಕ್ ಪಡೆದಿದ್ದರು.
ಇತ್ತ ಪರೀಕ್ಷೆ ಬರೆಯಲು ಪೂರ್ಣ ಪ್ರಮಾಣದ ಸಮಯ ನೀಡದ ಕಾರಣ, ತಪ್ಪು ಪ್ರಶ್ನೆಪತ್ರಿಕೆ ವಿತರಣೆ, ಓಎಂಆರ್ ಶೀಟ್ ವಿತರಣೆಯಲ್ಲಿ ಕಾಲ ವಿಳಂಬ ಸೇರಿದಂತೆ ಆಡಳಿತಾತ್ಮಕ ಕಾರಣಗಳಿಂದ ಒಟ್ಟು 1563 ಜನ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ ಹಿನ್ನೆಲೆಯಲ್ಲಿ ಅವರಿಗೆ ಗ್ರೇಸ್ ಮಾರ್ಕ್ಸ್ ನೀಡಲಾಗಿತ್ತು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಎನ್‌ಟಿಎ ಈ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಲಾಗುವುದು ಎಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.





