ನವದೆಹಲಿ: ದೇಶಾದ್ಯಂತ ನೀಟ್-ಪಿಜಿ ಪರೀಕ್ಷೆಯನ್ನು ಸುಮಾರು 2,28,542 ಬರೆಯಲಿದ್ದು, ಎರಡು ಪಾಳಿಯಲ್ಲಿ ಸುಮಾರು 170 ನಗರದ 416 ಪರೀಕ್ಷ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ.
ಆದರೆ ಸಮಯದ ಅಭಾವದಿಂದ ಪರೀಕ್ಷಾ ಕೇಂದ್ರಗಳನ್ನು ತಲುಪುವುದು ಪರಿಕ್ಷಾರ್ಥಿಗಳಿಗೆ ಕಷ್ಟಸಾಧ್ಯವಾಗುವುದರಿಂದ ಪರೀಕ್ಷೆಗಳನ್ನು ಮುಂದುಡುವಂತೆ ವಿಶಾಲ್ ಸುರೇನ್ ಎಂಬವರು ಸುಪ್ರಿಂ ಮೊರೆಹೊಗಿದ್ದರು.
ವಿಚಾರಾವಾಗಿ ವಕೀಲ ಅನಾಸ್ ತನ್ವೀರ್ ಅವರು ಸಲ್ಲಿಸಿದ್ದ ಅರ್ಜಿಯಲ್ಲಿ ಪರೀಕ್ಷೆ ನಡೆಯಲಿರುವ ನಗರಗಳ ಪಟ್ಟಿಯನ್ನು ಎನ್‌ಟಿಎ ಗುರುವಾರ ಜುಲೈ 31ರಂದು ಪ್ರಕಟಿಸಿದೆ ಹಾಗೂ ನಿರ್ಧಿಷ್ಟ ಪರೀಕ್ಷಾ ಕೇಂದ್ರಗಳನ್ನು ಆಗಸ್ಟ್ 8ರಂದು ಪ್ರಕಟಿಸೋದಾಗಿ ಹೇಳಿದೆ ಆದ್ದರಿಂದ ಪರೀಕ್ಷಾರ್ಥಿಗಳಿಗೆ ನಿಗದಿತ ಸಮಯದೊಳಗೆ ಪರೀಕ್ಷಾ ಕೇಂದ್ರಕ್ಕೆ ಹೋಗುವುದು ಕಷ್ಟವಾಗುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ಈ ಅರ್ಜಿಗಳನ್ನು ಪರಿಶೀಲಿಸದ್ದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಜೆ.ಬಿ ಪಾರ್ದಿವಾಲ ಮತ್ತು ಮನೋಜ್ ಮಿಶ್ರಾ ಅವರ ಪೀಠವೂ ಶುಕ್ರವಾರ ವಿಚಾರಣೆಯನ್ನು ಕೈಗೆತ್ತಿಕೊಳ್ಳೊದಾಗಿ ತಿಳಿಸಿತ್ತು. ಇಂದು ಈ ಕುರಿತು ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ಪರೀಕ್ಷಾ ಮುಂದೂಡಿಕೆ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.