Mysore
23
scattered clouds

Social Media

ಶನಿವಾರ, 31 ಜನವರಿ 2026
Light
Dark

ದರ್ಶನ್‌ಗೆ ಮತ್ತೆ ಜೈಲು: ಅಭಿಮಾನಿಗಳಲ್ಲಿ ತೀವ್ರ ಬೇಸರ

ನವದೆಹಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ ಸೇರಿದಂತೆ ಏಳು ಮಂದಿ ಆರೋಪಿಗಳ ಜಾಮೀನನ್ನು ಸುಪ್ರೀಂಕೋರ್ಟ್‌ ರದ್ದು ಮಾಡಿದೆ.

ಸುಪ್ರೀಂಕೋರ್ಟ್‌ನ ನ್ಯಾ.ಜೆ.ಬಿ.ಪರ್ದಿವಾಲಾ, ನ್ಯಾ.ಆರ್‌.ಮಹಾದೇವನ್‌ ಅವರಿದ್ದ ದ್ವಿಸದಸ್ಯ ಪೀಠದಿಂದ ಈ ಆದೇಶ ಬಂದಿದೆ.

ಈ ತೀರ್ಪಿನಿಂದ ನಟ ದರ್ಶನ್‌ ಜೈಲು ಸೇರಬೇಕಾದ ಪರಿಸ್ಥಿತಿ ಬಂದಿದ್ದು, ನಟನ ವೃತ್ತಿ ಜೀವನದ ಮೇಲೆ ಈ ತೀರ್ಪು ಭಾರೀ ಪ್ರಭಾವ ಬೀರಲಿದೆ.

ದರ್ಶನ್‌ ಜೊತೆ ಪವಿತ್ರಾ ಗೌಡ, ಜಗದೀಶ್‌, ಅನುಕುಮಾರ್‌, ಪ್ರದೂಶ್‌, ನಾಗರಾಜು, ಲಕ್ಷ್ಮಣ್‌ ಜಾಮೀನು ಕೂಡ ರದ್ದಾಗಿದೆ.

ಈ ಹಿನ್ನೆಲೆಯಲ್ಲಿ ಇಷ್ಟು ದಿನ ಆರಾಮಾಗಿ ಓಡಾಡಿಕೊಂಡಿದ ದರ್ಶನ್‌ ಈಗ ಜೈಲಿನಲ್ಲಿ ಕಂಬಿ ಎಣಿಸುವ ಪರಿಸ್ಥಿತಿ ಬಂದಿದೆ. ಪರಿಣಾಮ ಈ ವಿಷಯದಿಂದ ಅಭಿಮಾನಿಗಳಲ್ಲಿ ಭಾರೀ ಬೇಸರ ತಂದಿದೆ.

 

 

Tags:
error: Content is protected !!