ಫ್ಲೋರಿಡಾ: ಬಾಹ್ಯಾಕಾಶದಲ್ಲಿ ಸುದೀರ್ಘವಾಗಿ 286 ದಿನಗಳ ಕಾಲ ತಮ್ಮ ನಡಿಗೆಯನ್ನು ಪೂರೈಸಿ ಭೂಮಿಗೆ ಹಿಂತಿರುಗಿದ ಭಾರತೀಯ ಮೂಲದ ಮೊದಲ ಮಹಿಳಾ ಗಗನಯಾತ್ರಿಯಾಗಿ ಸುನಿತಾ ವಿಲಯಮ್ಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಬೋಯಿಂಗ್ ಸ್ಟಾರ್ ಲೈನರ್ ಕ್ಯಾಪ್ಸುಲ್‌ನಲ್ಲಿ ಬಾಹ್ಯಾಕಾಶಕ್ಕೆ ತೆರಳಿದ್ದ ಸುನಿತಾ ಅವರು 62 ಗಂಟೆ 6 ನಿಮಿಷಗಳ ಕಾಲ ಬಾಹ್ಯಾಕಾಶದಲ್ಲಿ ತಮ್ಮ ನಡಿಗೆಯನ್ನು ಪೂರೈಸಿದ್ದಾರೆ. ಈ ಹಿನ್ನೆಲೆ ಬಾಹ್ಯಾಕಾಶ ನಡಿಗೆ ಪೂರೈಸಿದ ಗಗಯಾತ್ರಿಗಳ ಸಾರ್ವಕಾಲಿಕ ದಾಖಲೆ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದುಕೊಂಡ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
2024ರ ಜೂನ್ 6ರಂದು ಸುನಿತಾ ಹಾಗೂ ವಿಲ್ಮೋರ್ ಅವರು 8 ದಿನಗಳ ಕಾರ್ಯಾಚರಣೆಗಾಗಿ ಬೋಯಿಂಗ್ ಸ್ಟಾರ್ ಲೈನರ್ ಕ್ಯಾಪ್ಸುಲ್‌ನಲ್ಲಿ ಬಾಹ್ಯಾಕಾಶಕ್ಕೆ ತೆರಳಿದ್ದರು. ಆದರೆ ಬಾಹ್ಯಾಕಾಶದಲ್ಲಿ ನೌಕೆಯ ಸಮಸ್ಯೆ ಮತ್ತು ತಾಂತ್ರಿಕ ದೋಷಗಳಿಂದಾಗಿ ಭೂಮಿಗೆ ಹಿಂದಿರುಗಲು ಸಾಧ್ಯವಾಗಿರಲಿಲ್ಲ.
ಈ ಕಾರಣಕ್ಕೆ ಅವರು ಬಾಹ್ಯಾಕಾಶದಲ್ಲಿ 286 ದಿನಗಳು ಕಳೆಯಬೇಕಾಯಿತು. ಆದರೆ ಇಂದು ಭಾರತ ಸಮಯದ ಪ್ರಕಾರ ಮಧ್ಯರಾತ್ರಿ 3.37ಕ್ಕೆ ಫ್ಲೋರಿಡಾ ಕರಾವಳಿಯಲ್ಲಿ ರಾಕೆಟ್‌ನ ಮೂಲಕ ಲ್ಯಾಂಡ್ ಆಗಿದ್ದಾರೆ. ಇನ್ನು ಸುನಿತಾ ಅವರು ಬಾಹ್ಯಾಕಾಶ ಕೇಂದ್ರದಲ್ಲಿ ಸುದೀರ್ಘ ವಾಸ ಮಾಡಿದ ವಿಶ್ವದ 2ನೇ ಗಗನಯಾತ್ರಿ ಆಗಿದ್ದಾರೆ. ಅಲ್ಲದೇ ಸುನಿತಾ ಅವರು ಒಟ್ಟಾರೆ 608 ದಿನಗಳನ್ನು ಬಾಹ್ಯಾಕಾಶ ಕೇಂದ್ರದಲ್ಲಿ ಕಳೆದಿದ್ದರೆ, ಪೆಗ್ಗಿ ವಿಟ್ಸನ್ ಅವರು 675 ದಿನಗಳನ್ನು ಪೂರೈಸಿ ಮೊದಲ ಸ್ಥಾನದಲ್ಲಿ ಇದ್ದಾರೆ.





