ಖಾರ್ಟೂಮ್: ಉಕ್ರೇನಿಯನ್ ನಿರ್ಮಿತ ಮಿಲಿಟರಿ ವಿಮಾನವು ಸುಡಾನ್‌ನ ಓಮ್‌ಡರ್ಮನ್ ನಗರದಲ್ಲಿ ಪತನಗೊಂಡಿದ್ದು, ಕನಿಷ್ಠ 46 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ವಾಯಿ ಸಾಯೀದ್ನಾ ವಾಯುನೆಲೆಯಿಂದ ಆಂಟೊನೊವ್ ವಿಮಾನವು ಟೇಕಾಫ್ ಆದ ಕೆಲವೇ ಹೊತ್ತಿನಲ್ಲಿ ಪತನಗೊಂಡಿದೆ.
ಮೃತರ ಶವಗಳನ್ನು ಓಮ್ದುಮರ್ನ್‌ನ ನೌ ಆಸ್ಪತ್ರೆಗೆ ರವಾನಿಸಲಾಗಿದೆ. ವಿಮಾನ ಪತನವಾದ ಕರಾರಿ ಜಿಲ್ಲೆಯ ಪ್ರದೇಶದಲ್ಲಿ ಹಲವಾರು ವಸತಿ ಮನೆಗಳಿಗೆ ಹಾನಿಯಾಗಿದೆ.
ಮೇಜರ್ ಜನರಲ್ ಬಹರ್ ಅಹಮ್ಮದ್ ಬಹರ್ ಮತ್ತು ಲೆಫ್ಟಿನೆಂಟ್ ಕರ್ನಲ್ ಅವದ್ ಅಯೂಬ್ ಸೇರಿದಂತೆ ಹಿರಿಯ ಸೇನಾ ಅಧಿಕಾರಿಗಳು ಹಾಗೂ ವಿಮಾನದ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.





