ಟೊಕಿಯೋ : ಮ್ಯಾನ್ಮಾರ್, ಥೈಲ್ಯಾಂಡ್‌ನಲ್ಲಿ ಸಂಭವಿಸಿದ ಭೀಕರ ಭೂಕಂಪದ ಆಘಾತದಿಂದ ಜಗತ್ತು ಚೇತರಿಸಿಕೊಳ್ಳುವ ಮೊದಲೇ ಜಪಾನ್‌ನಲ್ಲೂ ಇಂದು(ಏ.2) ಪ್ರಬಲ ಭೂಕಂಪನ ಸಂಭವಿಸಿದೆ.
ಜಪಾನ್ ಕ್ಯುಶುನಲ್ಲಿ 6 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಭಾರತೀಯ ಕಾಲಮಾನ ಸಂಜೆ 7;30ರ ಹೊತ್ತಿಗೆ ಅಲ್ಲಿ ಭೂಕಂಪ ಸಂಭವಿಸಿದೆ. ತಕ್ಷಣಕ್ಕೆ ಯಾವುದೇ ಜೀವಹಾನಿ ಆಗಿಲ್ಲ. ಆದರೆ ಭೂಮಿಯಿಂದ 30ಕಿಮೀ ಆಳದಲ್ಲಿ ಕೇಂದ್ರ ಬಿಂದು ಪತ್ತೆಯಾಗಿದೆ ಎಂದು ವರದಿಯಾಗಿದೆ.





