ಹೊಸದಿಲ್ಲಿ : ಕಳೆದ ವಾರ ನಡೆದ ಷೇರುಪೇಟೆ ವಹಿವಾಟಿನಲ್ಲಿ ಸೂಚ್ಯಂಗಳು ಇಳಿಕೆ ಕಂಡಿದ್ದರಿಂದ ದೇಶದ ಪ್ರಮುಖ 10 ಕಂಪನಿಗಳ ಪೈಕಿ 7 ಕಂಪೆನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯ ರೂ.1.75 ಲಕ್ಷ ಕೋಟಿ ಕರಗಿದೆ.
ರಿಲಯನ್ಸ್ ಇಂಡಸ್ಟ್ರೀಸ್‌ನ ಮಾರುಕಟ್ಟೆ ಬಂಡವಾಳ ಮೌಲ್ಯ ರೂ.89,720 ಕೋಟಿ ಕರಗಿದೆ. ಕಂಪನಿಯ ಒಟ್ಟು ಎಂ ಕ್ಯಾಪ್ ರೂ.18.24 ಲಕ್ಷ ಕೋಟಿಯಷ್ಟಾಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ರೂ.37,248 ಕೋಟಿ,
ಎಸ್‌ಬಿಐ ರೂ.35,299 ಕೋಟಿ, ಐಸಿಐಸಿಐ ಬ್ಯಾಂಕ್ ರೂ.8,121 ಕೋಟಿ, ಭಾರ್ತಿ ಏರ್‌ಟಲ್ ರೂ.2,480 ಕೋಟಿ, ಹಿಂದೂಸ್ತಾನ್ ಯೂನಿಲಿವರ್ ರೂ.2,091 ಕೋಟಿ ಮತ್ತು ಟಿಸಿಎಸ್ ಮಾರುಕಟ್ಟೆ ಬಂಡವಾಳ ಮೌಲ್ಯ ರೂ.271 ಕೋಟಿ ಕರಗಿದೆ. ಲಾರ್ಸೆನ್ ಆಂಡ್ ಯಂಡ್ ಟೊಬ್ರೊ ಎಂ ಕ್ಯಾಪ್‌ಗೆ ರೂ.18,051 ಕೋಟಿ, ಬಜಾಜ್ ಫೈನಾನ್ಸ್ ರೂ.8,680 ಕೋಟಿ ಮತ್ತು ಇನ್ಛೊಸಿಸ್‌ಗೆ ರೂ.6,245 ಕೋಟಿ ಸೇರ್ಪಡೆಯಾಗಿದೆ.




