Mysore
23
broken clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಅಯೋಧ್ಯೆ ಗೆಲುವಿನ ಬಗ್ಗೆ ಕವಿತೆ ಹೇಳಿ ಬಿಜೆಪಿಗೆ ಟಾಂಗ್‌ ಕೊಟ್ಟ ಅಖಿಲೇಶ್‌ ಯಾದವ್

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಸಮಾಜವಾದಿ ಪಕ್ಷದ ನಾಯಕ, ಸಂಸದ ಅಖಿಲೇಶ್‌ ಯಾದವ್‌ ಅಯೋಧ್ಯೆಯ ಕುರಿತು ಕವಿತೆಯೊಂದನ್ನು ಹೇಳಿದರು.

ಕವಿತೆಯ ಪ್ರತಿಯೊಂದು ಸಾಲುಗಳನ್ನು ಕೇಂದ್ರ ಸರ್ಕಾರವನ್ನು ಗುರಿಯಾಗಿ ಬರೆದುಕೊಂಡು ಬಂದಂತೆ ಕಾಣಿಸುತ್ತಿತ್ತು. ಅಯೋಧ್ಯೆಯಿಂದ ಸಂಸದರಾಗಿ ಆಯ್ಕೆಯಾಗಿರುವ ಸಂಸದ ಅವಧೇಶ್‌ ಪ್ರಸಾದ್‌ ಅವರನ್ನು ಕವಿತೆಯಲ್ಲಿ ಹೀರೋನನ್ನಾಗಿ ಮಾಡಲಾಗಿತ್ತು. ಸದನದಲ್ಲಿ ಅವಧೇಶ್‌ ಪ್ರಸಾದ್‌ ಅವರನ್ನು ನೋಡುತ್ತಲೇ ಅಖಿಲೇಶ್‌ ಯಾದವ್‌ ಕವಿತೆಯ ವಾಚನ ಮಾಡಿದರು. ಈ ಮಧ್ಯೆ ಐಎನ್‌ಡಿಐಎ ಸಂಸದರು ಅವಧೇಶ್‌ ಪ್ರಸಾದ್‌ ಪರ ಘೋಷಣೆಗಳನ್ನು ಕೂಗಿದರು.

ನಮಗೆ ಉತ್ತರ ಪ್ರದೇಶದಲ್ಲಿ ಮತ್ತೊಂದು ಅಭೂತಪೂರ್ವ ಗೆಲುವು ಸಿಕ್ಕಿದೆ. ಅದು ಏನು ಎಂದು ಸರ್ಕಾರ ರಚನೆ ಮಾಡಿರೋರಿಗೆ ಖಂಡಿತಾ ತಿಳಿದಿರುತ್ತದೆ. ಅಯೋಧ್ಯೆಯ ಗೆಲುವು ಭಾರತದ ಪ್ರಬುದ್ಧ ಮತದಾರರ ಪ್ರಜಾಪ್ರಭುತ್ವದ ತಿಳುವಳಿಕೆಗೆ ಸಂದ ಜಯವಾಗಿದೆ ಎಂದು ಅಖಿಲೇಶ್‌ ಯಾದವ್‌ ಅರ್ಥೈಸಿದರು.

ನಾವು ರಾಮ ರಚಿಸಿದ ರೇಖೆ ಎಂಬ ಮಾತನ್ನು ಹಿಂದಿನಿಂದಲೂ ಕೇಳಿಕೊಂಡು ಬಂದಿದ್ದೇವೆ. ಅಯೋಧ್ಯೆಯ ಗೆಲುವು ಸಂಪೂರ್ಣ ಶ್ರೀರಾಮನ ನಿರ್ಧಾರವಾಗಿದೆ ಎಂದು ಬಿಜೆಪಿ ಸೋಲಿಗೆ ವ್ಯಂಗ್ಯವಾಡಿದ್ದಾರೆ.

ಮತ್ತೆ ತಮ್ಮ ಮಾತು ಮುಂದುವರಿಸಿದ ಅಖಿಲೇಶ್‌ ಯಾದವ್‌ ಅವರು, ಇವರು ಒಳ್ಳೆಯ ಮನಸ್ಸಿನಿಂದ ಎಲ್ಲರಿಗೂ ಒಳ್ಳೆಯದನ್ನು ಮಾಡುತ್ತಾರೆ. ಇದು ಅಸತ್ಯದ ಮೇಲಿನ ಸತ್ಯದ ಜಯವಾಗಿದೆ. ತುಂಬಿ ಹರಿಯುತ್ತಿರುವ ನದಿಗೆ ಮರ್ಯಾದೆಯ ಘನತೆಯನ್ನು ಕಟ್ಟಿದವರು ಮರ್ಯಾದಾ ಪುರುಷೋತ್ತಮ ಪ್ರಭು ರಾಮ. ನಾವು ನಿಮಗೆಲ್ಲರಿಗೂ ಅಯೋಧ್ಯೆಯಿಂದ ಪ್ರೀತಿಯ ಸಂದೇಶ ತಂದಿದ್ದೇವೆ ಎಂದು ಹೇಳಿದರು.

ಬಳಿಕ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎಗೆ ಸಿಕ್ಕ ಗೆಲುವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಅಖಿಲೇಶ್‌ ಯಾದವ್‌ ಅವರು, ಇವಿಎಂ ಹೇಗೆ ಕೆಲಸ ಮಾಡುತ್ತೆ ಎಂಬುದರ ಬಗ್ಗೆ ನನಗೆ ತಿಳಿಯುತ್ತಿಲ್ಲ. ಈಗ ಇವಿಎಂ ಬಗ್ಗೆ ಏನನ್ನೂ ಹೇಳಲು ಉಳಿದಿಲ್ಲ. ಐಎನ್‌ಡಿಐಎ ಒಕ್ಕೂಟ ಲೋಕಸಭಾ  ಮುಂಬರುವ ಚುನಾವಣೆಯಲ್ಲಿ ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತದೆ ಎಂದು ಹೇಳಿದರು.

 

 

Tags: