ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಯಾವುದೇ ರಾಷ್ಟ್ರೀಯ ಪ್ರಮುಖ ವಿಷಯಗಳ ಕುರಿತು ಮಾತನಾಡುವುದಿಲ್ಲ ಎಂದು ಇತ್ತೀಚೆಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪ್ರಧಾನಿ ಮೇಲೆ ಕಿಡಿಕಾರಿದ್ದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದೆ ಸ್ಮೃತಿ ಇರಾನಿ ಅವರು ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಬಹಿರಂಗ ಸವಾಲ್ ಎಸೆದಿದ್ದಾರೆ.
ಪ್ರಧಾನಿ ಮೋದಿ ಕಾಲದಲ್ಲಿ ನಾವು ಮಾಡಿದ ಸಾಧನೆಗಳ ಬಗ್ಗೆ ಬಹಿರಂಗವಾಗಿ ಚರ್ಚೆಗೆ ಸಿದ್ದರಿದ್ದೇವೆ. ರಾಗಾ ಹಾಗೂ ಪ್ರಿಯಾಂಕಾ ಗಾಂಧಿ ಅವರು ಚರ್ಚೆಗೆ ಸ್ಥಳ, ನಿರೂಪಕರು, ಸುದ್ದಿವಾಹಿನಿ ಮತ್ತು ಸಮಯವನ್ನು ನಿಗದಿಪಡಿಸುವಂತೆ ಸವಾಲ್ ಎಸೆದಿದ್ದಾರೆ. ಒಂದು ಕಂಡೆ ಅಕ್ಕ-ತಮ್ಮ ಇದ್ದರೇ ಮತ್ತೊಂದು ಕಡೆ ಬಿಜೆಪಿಯ ವಕ್ತಾರರು ಇರುತ್ತಾರೆ. ನಮ್ಮ ಪಕ್ಷದಿಂದ ಎಲ್ಲವೂ ಸ್ಪಷ್ಟವಾಗಿರಲಿದೆ ಎಂದು ಸ್ಮೃತಿ ಟಾಂಗ್ ನೀಡಿದ್ದಾರೆ.





