Mysore
20
broken clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಏಕಕಾಲಕ್ಕೆ ಚುನಾವಣೆ: ಸಂವಿಧಾನ,ಒಕ್ಕೂಟ ವಿರೋಧಿ ಮಸೂದೆ ಎಂದ ಪ್ರಿಯಾಂಕಾ ಗಾಂಧಿ

ಹೊಸದಿಲ್ಲಿ: ಎನ್‌ಡಿಎ ನೇತೃತ್ವದ ಬಿಜೆಪಿ ಸರ್ಕಾರ ತಮ್ಮ ಪ್ರಣಾಳಿಕೆಯಲ್ಲಿ ಹೇಳಿದ ಹಾಗೇ ಏಕಕಾಲಕ್ಕೆ ಲೋಕಸಭೆ ಹಾಗೂ ವಿಧಾನಸಭೆಗೆ ಚುನಾವಣೆ ನಡೆಸುವ ʼಒಂದು ದೇಶ ಒಂದು ಚುನಾವಣೆʼ ಮಸೂದೆಯನ್ನು ಇಂದು ಲೋಕಸಭೆಯಲ್ಲಿ ಮಂಡಿಸಿದೆ. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್‌ ಸಂಸದೆ ಪ್ರಿಯಾಂಕಾ ಗಾಂಧಿ, ಈ ಮಸೂದೆಯು ಸಂವಿಧಾನ ಹಾಗೂ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದದ್ದು. ಈ ಮಸೂದೆಯಿಂದ ರಾಜ್ಯಗಳಿಗೆ ಇರುವ ಸ್ವಾಯತ್ತತೆಯೂ ಕೇಂದ್ರದ ಪಾಲಾಗುತ್ತದೆ ಎಂದು ಟೀಕಿಸಿದ್ದಾರೆ.

ಏಕಕಾಲಕ್ಕೆ ಚುನಾವಣೆ ನಡೆಸುವ ಎರಡು ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಿದ ಸಂದರ್ಭದಲ್ಲಿ ಚರ್ಚೆಯಲ್ಲಿ ಪಾಲ್ಗೊಂಡು ಪ್ರಿಯಾಂಕಾ ಮಾತನಾಡಿದರು.

ಸಂವಿಧಾನ(121ನೇ ತಿದ್ದುಪಡಿ) ಮಸೂದೆ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮಸೂದೆಯು ಒಕ್ಕೂಟ ರಚನೆಗೆ ವಿರುದ್ಧವಾದದ್ದು ಎಂದು ಪ್ರತಿಪಕ್ಷಗಳು ಮಸೂದೆ ವಿರೋಧಿಸಿದವು. ಮತ ವಿಭಜನೆಗೆ ವಿರೋಧ ಪಕ್ಷಗಳು ಪಟ್ಟು ಹಿಡಿದಾಗ ಈ ಮಸೂದೆಗಳನ್ನು ಮಂಡಿಸಲಾಯಿತು.

ಹೊಸ ಸಂಸʻತ್‌ ಭವನದಲ್ಲಿ ನಡೆದ ಲೋಕಸಭಾ ಕಲಾಪದಲ್ಲಿ ಇದೇ ಮೊದಲ ಬಾರಿಗೆ ವಿದ್ಯುನ್ಮಾನ ಮತಯಂತ್ರವನ್ನು ಬಳಸಲಾಗಿದೆ. ಜೊತೆಯಲ್ಲಿ ಚೀಟಿಯನ್ನು ಎಣಿಸಲಾಗಿದೆ. ಇದರಲ್ಲಿ 269 ಸಂಸದರು ಮಸೂದೆ ಪರವಾಗಿ ಮತ ಚಲಾಯಿಸಿದರೆ, 198 ಸಂಸದರು ವಿರುದ್ಧವಾಗಿ ಮತ ಚಲಾಯಿಸಿದರು.

Tags: