Mysore
28
few clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಭಾರತಕ್ಕೆ ಶ್ರೀಲಂಕಾದ ಅಧ್ಯಕ್ಷ ಮೊದಲ ಪ್ರವಾಸ: ಪ್ರಧಾನಿ ಮೋದಿ ಜೊತೆ ಮಾತುಕತೆ

ನವದೆಹಲಿ: ಶ್ರೀಲಂಕಾದ ಅಧ್ಯಕ್ಷ ಅನುರಾ ಕುಮಾರ ದಿಸ್ಸನಾಯಕೆ ರಾಷ್ಟ್ರ ನಾಯಕರಾಗಿ ಮೊದಲ ಬಾರಿಗೆ ಭಾರತ ಪ್ರವಾಸ ಕೈಗೊಂಡಿದ್ದು, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಸೋಮವಾರ ಮಾತುಕತೆ ನಡೆಸಿದ್ದಾರೆ.

ಇದೇ ವೇಳೆ ರಕ್ಷಣೆ, ವ್ಯಾಪಾರ, ಹಾಗೂ ಹೂಡಿಕೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಭಾರತ- ಶ್ರೀಲಂಕಾ ನಡುವಿನ ಸಹಕಾರ ಬಲಪಡಿಸುವ ಕುರಿತು ಉಭಯ ನಾಯಕರು ಚರ್ಚಿಸಿದರು.

ಭಾನುವಾರ ದೆಹಲಿಗೆ ಆಗಮಿಸಿದ ದಿಸ್ಸನಾಯಕೆಗೆ ರಾಷ್ಟ್ರಪತಿ ಭವನದಲ್ಲಿ ಸ್ವಾಗತ ನೀಡಲಾಗಿದೆ.

ಭ್ರಷ್ಟಚಾರದ ವಿರುದ್ಧ ಹೋರಾಡುವ ಪ್ರತಿಜ್ಞೆಯೊಂದಿಗೆ ಅಧಿಕಾರಕ್ಕೆ ಬಂದ ದಿಸ್ಸನಾಯಕೆ ಅವರ ಮೊದಲ ಪ್ರವಾಸವಾಗಿದೆ.

ನಿನ್ನೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರನ್ನು ಭೇಟಿ ಮಾಡಿದ್ದು, ಎರಡು ದೇಶಗಳ ನಡುವೆ ಉತ್ಪಾದಕತೆ ಹೆಚ್ಚಿಸುವುದು, ಆರ್ಥಿಕತೆ, ಪ್ರಾದೇಶಿಕ ಭದ್ರತೆಯನ್ನು ಉತ್ತೇಜಿಸುವುದರ ಕುರಿತು ಚರ್ಚೆ ನಡೆಸಿದ್ದಾರೆ.

ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲಿದ್ದು, ಭಾರತ- ಶ್ರೀಲಂಕಾ ನಡುವಿನ ವಾಣಿಜ್ಯ ಸಂಪರ್ಕಗಳನ್ನು ಉತ್ತೇಜಿಸಲು ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲಿದ್ದಾರೆ.ನಂತರ ಬೋಧಗಯಾಕ್ಕೆ ಭೇಟಿ ನೀಡಲಿದ್ದಾರೆ.

 

Tags: