ಕೊಲೊಂಬೊ: ಟೀಂ ಇಂಡಿಯಾ ಮಹಿಳಾ ತಂಡದ ಆಫ್ ಸ್ಪಿನ್ನರ್ ಶ್ರೇಯಾಂಕಾ ಪಾಟೀಲ್ ಎಡಗೈಗೆ ಗಂಭೀರ ಗಾಯವಾಗಿದ್ದು, ಮಹಿಳಾ ಏಷ್ಯಾ ಕಪ್ 2024ರಿಂದ ಹೊರಗುಳಿದಿದ್ದಾರೆ.
ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಶ್ರೇಯಾಂಕಾ ಪಾಟೀಲ್ ಎಡಗೈಯ ನಾಲ್ಕನೇ ಬೆರಳಿಗೆ ಗಾಯಗವಾಗಿದೆ ಎಂದು ತಿಳಿಸಿದೆ.
ಶ್ರೇಯಾಂಕಾ ಪಾಟೀಲ್ ಬದಲಿದೆ ವುಮೆನ್ ಇನ್ ಬ್ಲೂ ತಂಡದಲ್ಲಿ ತನುಜಾ ಕನ್ವರ್ ಆಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ದಂಬುಲ್ಲಾದಲ್ಲಿ ನಡೆದ ಪಾಕಿಸ್ತಾನ ಮಹಿಳೆಯರ ವಿರುದ್ಧದ ಪಂದ್ಯದಲ್ಲಿ ಶ್ರೇಯಾಂಕಾ ಅದ್ಬುತವಾಗಿ ಬೌಲಿಂಗ್ ಮಾಡಿದ್ದರು. ಯುವ ಆಟಗಾರ್ತಿ ತನ್ನ 3.2 ಓವರ್‌ಗಳಲ್ಲಿ 14 ರನ್‌ಗಳನ್ನು ಬಿಟ್ಟು ಎರಡು ವಿಕೆಟ್ ಕಿತ್ತಿದ್ದರು.
ಇದೀಗ ಅವರ ಎಡಗೈ ಬೆರಳಿಗೆ ಗಾಯಗಳಾಗಿದ್ದು, ಅವರು ಆಟದಿಂದ ಹೊರಗುಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೇಯಾಂಕಾ ಪಾಟೀಲ್ ಅಭಿಮಾನಿಗಳು ಭಾರೀ ಬೇಸರದಲ್ಲಿದ್ದಾರೆ.