Mysore
26
scattered clouds

Social Media

ಗುರುವಾರ, 08 ಜನವರಿ 2026
Light
Dark

ಶೀಷ್‌ ಮಹಲ್‌ ವಿವಾದ: ಕೇಂದ್ರ ಲೋಕೋಪಯೋಗಿ ಇಲಾಖೆಗೆ ತನಿಖೆ ನಡೆಸುವಂತೆ ಆದೇಶಿಸಿದ ಕೇಂದ್ರ ಜಾಗೃತ ಆಯೋಗ

ನವದೆಹಲಿ: ದೆಹಲಿಯ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್‌ ಅವರ ಅಧಿಕೃತ ನಿವಾಸವನ್ನು ಎಂಟು ಎಕರೆ ವಿಸ್ತೀರ್ಣದಲ್ಲಿ ಐಷಾರರಾಮಿ ಮಹಲಾಗಿ ಪರವರ್ತಿಸಲು ಕಟ್ಟಡ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಜಾಗೃತ ಆಯೋಗ ವಿವರವಾದ ತನಿಖೆಗೆ ಆದೇಶ ನೀಡಿದೆ.

ಬಿಜೆಪಿ ನಾಯಕ ವಿಜೇಂದರ್‌ ಗುಪ್ತಾ ಅವರು 2024ರರ ಅಕ್ಟೋಬರ್‌ 14 ರಂದು ಕೇಂದ್ರ ಜಾಗೃತ ಆಯೋಗಕ್ಕೆ ದೂರು ನೀಡಿದ್ದರು. ಈ ದೂರಿನ ಅನ್ವಯ ಐಷಾರಾಮಿ ಮತ್ತು ನವೀಕರಣದ ಬಗ್ಗೆ ತನಿಖೆ ನಡೆಸುವಂತೆ ಕೇಂದ್ರ ಲೋಕೋಪಯೋಗಿ ಇಲಾಖೆಗೆ ತಿಳಿಸಿದೆ.

ಕೇಂದ್ರ ಜಾಗೃತ ಆಯೋಗ ಶೀಷ್‌ ಮಹಲ್‌ ವಿವಾದದ ದೂರರನ್ನು 2024ರ ನವೆಂಬರ್‌ 14ರಂದು ಅಗತ್ಯ ಕ್ರಮಕ್ಕಾಗಿ ಔಪಚಾರಿಕವಾಗಿ ಸಿಪಿಡಬ್ಲ್ಯೂಡಿಗೆ ರವಾನಿಸಲಾಗಿತ್ತು. ಇದನ್ನು ಡಿಸೆಂಬರ್‌ 24 ರಂದು ಆರಂಭಿಕ ವಿಚಾರಣೆಯ ಬಳಿಕ ಸಿಪಿಡಬ್ಲ್ಯೂಡಿ ಕೇಂದ್ರ ಜಾಗೃತ ಆಯೋಗಕ್ಕೆ ವಾಸ್ತವಿಕ ವರದಿಯನ್ನು ಸಲ್ಲಿಕೆ ಮಾಡಲಾಗಿತ್ತು. ಆದರೆ ಇದೀಗ ಫೆಬ್ರವರಿ.13 ರಂದು ವರದಿಯನ್ನು ಪರಿಶೀಲಿಸಿದ ನಂತರ ಕೇಂದ್ರ ಜಾಗೃತ ಆಯೋಗ ಸಿಎಂ ನಿವಾಸದ ನವೀಕರಣ ಹಾಗೂ ಐಷಾರಾಮಿ ಸೇರ್ಪಡೆಗಳ ವೆಚ್ಚದ ಕುರಿತು ವಿವರವಾದ ತನಿಖೆ ನಡೆಸುವಂತೆ ಸೂಚಿಸಿದೆ.

ದೂರಿನಲ್ಲಿ ಏನಿದೆ?

ದೆಹಲಿಯ ರಾಜ್‌ಪುರ ರಸ್ತೆಯಲ್ಲಿರುವ ಪ್ಲಾಟ್ ಸಂಖ್ಯೆ 45 ಮತ್ತು 47 ಸೇರಿದಂತೆ ಸರ್ಕಾರಿ ಆಸ್ತಿಗಳನ್ನು ಹಿಂದೆ ಟೈಪ್-ವಿ ಫ್ಲಾಟ್‌ಗಳಾಗಿದ್ದು, ಅಲ್ಲಿ ಹಿರಿಯ ಅಧಿಕಾರಿಗಳು ಹಾಗೂ ನ್ಯಾಯಾಧೀಶರನ್ನು ಇರಿಸಲಾಗಿತ್ತು. ಅಲ್ಲದೇ ಫ್ಲಾಗ್‌ ಸ್ಟಾಪ್‌ ರಸ್ತೆಯಲ್ಲಿರುವ ಎರಡು ಬಂಗಲೆಗಳನ್ನು ಹೊಡೆದು ಹಾಕಿ ಹೊಸ ನಿವಾಸದಲ್ಲಿ ವಿಲೀನಗೊಳಿಸಲಾಗಿದೆ. ಜೊತೆಗೆ ಶೀಷ್‌ ಮಹಲ್‌ ನಿರ್ಮಾಣವೂ ನೆಲದ ವ್ಯಾಪ್ತಿ ಹಾಗೂ ನೆಲದ ವಿಸ್ತೀರ್ಣದ ಅನುಪಾತದ ಮಾನದಂಡಗಳನ್ನು ಉಲ್ಲಂಘಿಸಿದೆ. ಹೀಗಾಗಿ ಸರಿಯಾದ ವಿನ್ಯಾಸ ಯೋಜನೆ ಮತ್ತು ಅನುಮೋದನೆಗಳನ್ನು ಹೊಂದಿಲ್ಲ ಎಂದು ದೂರು ನೀಡಿದ್ದರು.

Tags:
error: Content is protected !!