ಹೈದರಾಬಾದ್: ಜಗ್ಗಿ ವಾಸುದೇವ್ ಆಧ್ಯತ್ಮೀಕ ಕೇಂದ್ರ ಈಶಾ ಫೌಂಡೇಷನ್ ನಡೆಸುತ್ತಿರುವ ಶಾಲೆಯಲ್ಲಿ ತಮ್ಮ ಮಗನ ಮೇಲೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಈಶಾ ಫೌಂಡೇಚನ್ ಒಡೆತನದಲ್ಲಿರಿವ ಶಿಕ್ಷಣ ಸಂಸ್ಥೆಗಳು ನಿರಂಕುಶವಾಗಿ ನಡೆದುಕೊಳ್ಳುತ್ತಿವೆ ಎಂದು ಆಂಧ್ರಪ್ರದೇಶದ ರಾಜಂಡ್ರಿಯ ದಂಪತಿ ಸತ್ಯ ನರೇಂದ್ರ ಮತ್ತು ಯಾಮಿನಿ ರಾಗಣಿ ದೂರಿದ್ದಾರೆ.
ಈಶಾ ಸ್ಕೊಲ್‌ನಲ್ಲಿ ಬಾಲಕನೊಬ್ಬ ಕಳೆದ 3 ವರ್ಷಗಳಿಂದ ತಮ್ಮ ಮಗನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ಕುರಿತು ಶಾಲೆಯ ಆಡಳಿತ ಮಂಡಳಿ ಗಮನಕ್ಕೆ ತಂದರು ಕೂಡ ಯಾವುದೇ ರೀತಿಯ್ರ ಕ್ರಮ ತೆಗೆದುಕೊಂಡಿಲ್ಲ ಎಂದು ಅವರು ಹೇಳಿದ್ದಾರೆ.
ಸ್ವತಃ ರಾಜಂಡ್ರಿಯ ದಂಪತಿ ಸತ್ಯ ನರೇಂದ್ರ ಮತ್ತು ಯಾಮಿನಿ ರಾಗಣಿಯು ಈಶಾ ಫೌಂಡೇಷನ್‌ನ ಮಾಜಿ ಸ್ವಯಂಸೇವಕರಾಗಿದ್ದಾರೆ. ಐದುನೈದು ವರ್ಷಗಳಿಂದ ಸ್ವಯಂಸೇವಕರಾಗಿದ್ದ ಅವರು ಇತ್ತೀಚೆಗೆ ಈಶಾ ಫೌಂಡೇಷನ್‌ನಿಂದ ಹೊರನಡೆದಿರುವುದಾಗಿ ಹೇಳಿಕೊಂಡಿದ್ದಾರೆ.
ಈಶಾ ಫೌಂಡೇಷನ್ ಶಾಲೆಗಳಲ್ಲಿ ಕೆಲವು ಆಚರಣೆಗಳಲ್ಲಿ ಹದಿಹರೆಯದ ಬಾಲಕಿಯರು ಕೆಲವು ಆಚರಣೆಗಳಲ್ಲಿ ಬರಿ ಎದೆಯಲ್ಲಿ ಭಾಗವಹಿಸುವಂತೆ ಒತ್ತಾಯಿಸಲಾಗುತ್ತಿದೆ. ಅಲ್ಲದೆ 8 ವರ್ಷದ ಬಾಲಕಿ ಮೇಲೆ ದೈಹಿಕ ಶಿಕ್ಷಣ ಶಿಕ್ಷಕರೊಬ್ಬರು ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ದಂಪತಿ ಅಲ್ಲಿನ ಖಾಸಗಿ ಮಾಧ್ಯಮಕ್ಕೆ ತಿಳಿಸಿದ್ದಾರೆ.





