Mysore
27
scattered clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಪಾಕಿಸ್ತಾನದಲ್ಲಿ ಭೀಕರ ಪ್ರವಾಹ: 300ಕ್ಕೂ ಅಧಿಕ ಮಂದಿ ಸಾವು

pakisthan

ಬುನೇರ್(ಪಾಕಿಸ್ತಾನ): ವಾಯುವ್ಯ ಪಾಕಿಸ್ತಾನದ ಬುನೇರ್ ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹಕ್ಕೆ 300ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ.

ರಕ್ಷಣಾ ಕಾರ್ಯಕರ್ತರು ತೀವ್ರ ಪ್ರವಾಹ ಮತ್ತು ಭೂಕುಸಿತದಿಂದ ನೆಲಸಮವಾದ ಮನೆಗಳ ಅವಶೇಷಗಳಿಂದ ಕಳೆದ ರಾತ್ರಿ ಮತ್ತೆ 63 ಶವಗಳನ್ನು ಹೊರ ತೆಗೆದಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಳೆಯಾಗುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉಕ್ಕೇರಿದ ಪ್ರವಾಹದ ಹರಿವು ನೂರಾರು ಬಂಡೆಗಳನ್ನು ಮತ್ತು ಟನ್‍ಗಟ್ಟಲೆ ಕೆಸರನ್ನು ಹೊತ್ತು ತಂದಿರುವ ಪರಿಣಾಮ ಈ ಅನಾಹುತ ಸಂಭವಿಸಿದೆ.

ಶುಕ್ರವಾರ ಮೇಘಸ್ಫೋಟ ಮತ್ತು ಪ್ರವಾಹದಿಂದ ಧ್ವಂಸವಾದ ಖೈಬರ್ ಪಖ್ತೂಂಖ್ವಾ ಪ್ರಾಂತ್ಯದ ಭಾಗಗಳಲ್ಲಿ ಒಂದಾದ ಬುನೇರ್‌ನಲ್ಲಿ ನೂರಾರು ರಕ್ಷಣಾ ಕಾರ್ಯಕರ್ತರು ಇನ್ನೂ ಬದುಕುಳಿದಿರುವವರಿಗಾಗಿ ಶೋಧ ನಡೆಸುತ್ತಿದ್ದಾರೆ ಎಂದು ತುರ್ತು ಸೇವೆಗಳ ವಕ್ತಾರ ಮೊಹಮದ್ ಸುಹೈಲ್ ತಿಳಿಸಿದ್ದಾರೆ. ಘಟನೆಯಲ್ಲಿ ನೂರಾರು ಮನೆಗಳು ಕೊಚ್ಚಿಹೋಗಿವೆ.

Tags:
error: Content is protected !!