Mysore
29
few clouds

Social Media

ಮಂಗಳವಾರ, 11 ಮಾರ್ಚ್ 2025
Light
Dark

ತೆಲಂಗಾಣದಲ್ಲಿ 7 ಮಂದಿ ಮಾವೋವಾದಿಗಳ ಎನ್‌ಕೌಂಟರ್‌

ಹೈದರಾಬಾದ್:‌ ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ಇಂದು ಮುಂಜಾನೆ 7 ಮಂದಿ ಮಾವೋವಾದಿಗಳನ್ನು ಪೊಲೀಸರು ಹೊಡೆದುರುಳಿಸಿದ್ದಾರೆ.

ಇಂದು ಮುಂಜಾನೆ 5.30ರ ವೇಳೆಗೆ ಚಲ್ಪಾಕ ಅರಣ್ಯದಲ್ಲಿ ಮಾವೋವಾದಿಗಳು ಹಾಗೂ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದೆ.

ಕೂಂಬಿಂಗ್‌ ಕಾರ್ಯಾಚರಣೆ ವೇಳೆ ಮಾವೋವಾದಿ ಗುಂಪನ್ನು ಗುರುತಿಸಿ ಶರಣಾಗುವಂತೆ ಆದೇಶ ನೀಡಲಾಗಿತ್ತು.

ಆದರೆ ಮಾವೋವಾದಿಗಳು ಇದ್ಯಾವುದಕ್ಕೂ ಜಗ್ಗದೇ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದರು.

ಇದಕ್ಕೆ ಪ್ರತಿಯಾಗಿ ಪೊಲೀಸರು ಕೂಡ ಗುಂಡಿನ ಸುರಿಮಳೆ ಸುರಿಸಿ 7 ಮಂದಿ ಮಾವೋವಾದಿಗಳನ್ನು ಹತ್ಯೆ ಗೈದಿದ್ದಾರೆ.

ಘಟನಾ ಸ್ಥಳದಲ್ಲಿ ಅನೇಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿ ಎರಡು ಎಕೆ 47 ರೈಫಲ್‌ಗಳು ಸೇರಿವೆ ಎಂಬ ಮಾಹಿತಿ ಲಭ್ಯವಾಗಿದೆ.

ನವೆಂಬರ್.‌21ರಂದು ಪೊಲೀಸ್‌ ಮಾಹಿತಿದಾರರೆಂದು ಶಂಕಿಸಿ ಮಾವೋವಾದಿಗಳು ಇಬ್ಬರು ಬುಡಕಟ್ಟು ಜನರನ್ನು ಹತ್ಯೆ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ತೆಲಂಗಾಣ ಹಾಗೂ ನಕ್ಸಲ್‌ ವಿರೋಧಿ ಪಡೆಗಳು ಜಂಟಿಯಾಗಿ ಕೂಂಬಿಂಗ್‌ ಕಾರ್ಯಾಚರಣೆ ನಡೆಸಿ ಏಳು ಮಂದಿ ಮಾವೋವಾದಿಗಳನ್ನು ಎನ್‌ಕೌಂಟರ್‌ ಮಾಡಿದ್ದಾರೆ.

ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

Tags: