ವಾಷಿಂಗ್ಟನ್– ಅಚ್ಚರಿಯ ಬೆಳವಣಿಗೆ ಎಂಬಂತೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ರಾಜಕೀಯ ಸಹಾಯಕ ಮತ್ತು ಶ್ವೇತಭವನದ ಪ್ರಮುಖ ಅಧಿಕಾರಿಯಾದ ಸೆರ್ಗಿಯೊ ಗೋರ್ ಅವರನ್ನು ಅಮೆರಿಕಾದ ಭಾರತೀಯ ರಾಯಭಾರಿಯಾಗಿ ನೇಮಕ ಮಾಡಲಾಗಿದೆ.
ಭಾರತದೊಂದಿಗೆ ಅಮೆರಿಕ ಸಂಬಂಧ ಸೂಕ್ಷ್ಮ ಹಂತದಲ್ಲಿರುವಾಗ ಟ್ರಂಪ್ ತಮ್ಮ ಅತ್ಯಂತ ನಂಬಿಕಸ್ಥ ಅಧಿಕಾರಿಯನ್ನು ಈ ಮಹತ್ವದ ಹುದ್ದೆಗೆ ಆಯ್ಕೆ ಮಾಡಿದ್ದಾರೆ.
ಗೋರ್ ಅವರನ್ನು ಭಾರತ ರಾಯಭಾರಿ ಮಾತ್ರವಲ್ಲದೇ ದಕ್ಷಿಣ ಮತ್ತು ಮಧ್ಯ ಏಷ್ಯಾಕ್ಕೆ ವಿಶೇಷ ರಾಯಭಾರಿಯಾಗಿಯೂ ಟ್ರಂಪ್ ನೇಮಿಸಿದ್ದಾರೆ.
ಈ ಕುರಿತು ತಮ್ಮ ಟ್ರೂತ್ ಸೋಶಿಯಲ್ ವೇದಿಕೆಯಲ್ಲಿ ಪ್ರಕಟಿಸಿರುವ ಡೊನಾಲ್ಡ್ ಟ್ರಂಪ್ ಅವರು, ವಿಶ್ವದ ಅತ್ಯಂತ ಜನನಿಬಿಡ ಪ್ರದೇಶದಲ್ಲಿ ನನ್ನ ಕಾರ್ಯಸೂಚಿಯನ್ನು ಜಾರಿಗೊಳಿಸಲು ಮತ್ತು ಅಮೆರಿಕವನ್ನು ಮತ್ತೆ ಶ್ರೇಷ್ಠವಾಗಿಸಲು ನಾನು ಸಂಪೂರ್ಣವಾಗಿ ವಿಶ್ವಾಸ ಇಡಬಹುದಾದ ವ್ಯಕ್ತಿ ಇರುವುದು ಮುಖ್ಯ.
ಆದ್ದರಿಂದ ಸೆರ್ಗಿಯೊ ಗೋರ್ ಅವರನ್ನು ಭಾರತದ ರಾಯಭಾರಿಯಾಗಿ ನೇಮಿಸುತ್ತಿದ್ದು, ಗೋರ್ ಅವರನ್ನು ಭಾರತ ಗಣರಾಜ್ಯಕ್ಕೆ ನಮ್ಮ ಮುಂದಿನ ಅಮೆರಿಕದ ರಾಯಭಾರಿಯಾಗಿ ಬಡ್ತಿ ನೀಡುತ್ತಿದ್ದೇನೆ ಎಂದು ಘೋಷಿಸಲು ನನಗೆ ಸಂತೋಷವಾಗುತ್ತಿದೆ. ಅವರು ದಕ್ಷಿಣ ಮತ್ತು ಮಧ್ಯ ಏಷ್ಯಾ ವ್ಯವಹಾರಗಳಿಗೆ ವಿಶೇಷ ರಾಯಭಾರಿಯಾಗಿಯೂ ಸೇವೆ ಸಲ್ಲಿಸಲಿದ್ದಾರೆ ಎಂದು ಹೇಳಿದ್ದಾರೆ.





