Mysore
20
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸಾರ್ವಕಾಲಿಕ ದಾಖಲೆ

ಮುಂಬೈ: ಇಂದು ಭಾರತೀಯ ಷೇರು ಮಾರುಕಟ್ಟೆ ಸಾರ್ವಕಾಲಿಕ ದಾಖಲೆ ನಿರ್ಮಿಸಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಸೆನ್ಸೆಕ್ಸ್‌ 79 ಸಾವಿರ ಗಡಿದಾಟಿದರೆ, ನಿಫ್ಟಿ ಕೂಡ 24 ಸಾವಿರ ಗಡಿ ದಾಟಿದೆ.

ಬಾಂಬೆ ಷೇರು ಮಾರುಕಟ್ಟೆಯಲ್ಲಿ ಗೂಳಿ ನೆಗೆತ ಮುಂದುವರಿದಿದ್ದು, ನಿನ್ನೆ 78,053,52 ಅಂಕಗಳ ದಾಖಲೆಯ ಮಟ್ಟಕ್ಕೆ ತಲುಪಿದ್ದ ಸೆನ್ಸೆಕ್ಸ್‌ ಇಂದು 79 ಸಾವಿರ ಗಡಿದಾಟಿದರೆ, ನಿಫ್ಟಿ ಕೂಡ 24 ಸಾವಿರ ಗಡಿ ದಾಟಿದ್ದು, ಹೊಸ ದಾಖಲೆ ಬರೆದಿದೆ.

ಇಂದಿನ ವಹಿವಾಟಿನಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ನ ಬ್ಲೂ ಚಿಪ್‌ ಮತ್ತು ಐಸಿಐಸಿಐಯ ಷೇರು ಖರೀದಿಯೊಂದಿಗೆ 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್‌ 339.51 ಪಾಯಿಂಟ್ಸ್‌ ಏರಿಕೆ ಕಂಡು 79,013,76ಕ್ಕೆ ತಲುಪಿದೆ.

ಅದೇ ರೀತಿ ನಿಫ್ಟಿ ಕೂಡ 97.6 ಪಾಯಿಂಟ್‌ ಏರಿಕೆ ಕಂಡು ಸಾರ್ವಕಾಲಿಕ ಗರಿಷ್ಠ 24 ಸಾವಿರ ಗಡಿ ದಾಟಿದೆ. ಇಂದಿನ ವಹಿವಾಟು ಅಂತ್ಯಕ್ಕೆ ಸೆನ್ಸೆಕ್ಸ್‌ 568.93 ಅಂಕಗಳ ಸೇರ್ಪಡೆಯೊಂದಿಗೆ 79,243.18 ಅಂಕಗಳಿಗೆ ಏರಿಕೆಯಾದರೆ, ನಿಫ್ಟಿ 175.70 ಅಂಕಗಳ ಸೇರ್ಪಡೆಯೊಂದಿಗೆ 24,044.50 ಅಂಕಗಳಿಗೆ ಏರಿಕೆಯಾಗಿದೆ.

ಅಲ್ಟ್ರಾಟೆಕ್‌ ಸಿಮೆಂಟ್‌, ಜೆಎಸ್‌ಡಬ್ಲ್ಯೂ ಸ್ಟೀಲ್‌, ರಿಲಯನ್ಸ್‌ ಇಂಡಸ್ಟ್ರೀಸ್‌, ಆಕ್ಸಿಸ್‌ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಬಜಾಜ್‌ ಪೈನಾನ್ಸ್‌, ಕೋಟಕ್‌ ಮಹೀಂದ್ರಾ ಬ್ಯಾಂಕ್‌ ಮತ್ತು ಟಾಟಾ ಸ್ಟೀಲ್‌ ಅತೀ ಹೆಚ್ಚು ಲಾಭ ಗಳಿಸಿದರೆ, ಮಾರುತಿ, ಟೆಕ್‌ ಮಹೀಂದ್ರಾ, ಎಚ್‌ಸಿಎಲ್‌ ಟೆಕ್ನಾಲಜೀಸ್‌ ಮತ್ತು ಲಾರ್ಸನ್‌ ಅಂಡ್‌ ಟೂಬ್ರೊ ಅತೀ ಹೆಚ್ಚು ನಷ್ಟ ಅನುಭವಿಸಿವೆ.

 

 

Tags: