ಚಂಡಿಗಢ: ಹರಿಯಾಣದ ನರ್ನೌಲ್ ಎಂಬಲ್ಲಿ ಗುರುವಾರ ಶಾಲಾ ಬಸ್ ಉರುಳಿ ಬಿದ್ದ ಪರಿಣಾಮ ಆರು ಮಕ್ಕಳು ಸಾವಿಗೀಡಾಗಿದ್ದು, 20 ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದಾರೆ.
ಇಂದು ಈದ್-ಉಲ್-ಫಿತ್ರ್ ರಜೆ ಇದ್ದ ಹೊರತಾಗಿಯೂ ಶಾಲೆ ಕಾರ್ಯಚರಿಸುತ್ತಿತ್ತ ಎನ್ನಲಾಗಿದೆ. ಈ ಬಸ್ ಉನ್ಹಾನಿ ಗ್ರಾಮನ ಜಿ ಎಲ್ ಪಬ್ಲಿಕ್ ಸ್ಕೂಲ್‌ಗೆ ಸೇರಿದೆ. ಚಾಲಕ ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡ ಪರಿಣಾಮ ಬಸ್ ಮರಕ್ಕೆ ಡಿಕ್ಕಿ ಹೊಡೆದಿದೆ. ಬಸ್ ಚಾಲಕ ಮಧ್ಯದ ನಶೆಯಲ್ಲಿದ್ದಿರಬಹುದು ಎಂಬ ಶಂಕೆಯಿದೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಹೇಳಿದ್ದಾರೆ.