Mysore
17
scattered clouds

Social Media

ಬುಧವಾರ, 24 ಡಿಸೆಂಬರ್ 2025
Light
Dark

ಕೆಲ ಧರ್ಮ, ಭಾಷೆ ಮತ್ತು ಸಮುದಾಯಗಳು ಕೀಳು ಎಂದು ಆರ್‌ಎಸ್‌ಎಸ್‌ ಭಾವಿಸುತ್ತದೆ: ರಾಹುಲ್‌ ಗಾಂಧಿ

ವಾಷಿಂಗ್ಟನ್:‌ ಅಮೆರಿಕಾ ಪ್ರವಾಸದಲ್ಲಿರುವ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ ವಾಷಿಂಗ್ಟನ್‌ನ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿ ಆರ್‌ಎಸ್‌ಎಸ್‌ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ.

ಆರ್‌ಎಸ್‌ಎಸ್‌ ಕೆಲ ಧರ್ಮಗಳು, ಭಾಷೆಗಳು ಮತ್ತು ಸಮುದಾಯಗಳನ್ನು ಇತರರಿಗಿಂತ ಕೀಳು ಎಂದು ಪರಿಗಣಿಸುತ್ತದೆ ಎಂದು ಟೀಕಿಸಿದ ರಾಹುಲ್‌ ಗಾಂಧಿ ಭಾರತದಲ್ಲಿ ಹೋರಾಟ ಇದರ ಬಗ್ಗೆಯೇ ಹೊರತು ರಾಜಕೀಯದ ಬಗ್ಗೆ ಅಲ್ಲ ಎಂದು ಹೇಳಿದರು.

ದೇಶದಲ್ಲಿ ಹೋರಾಟ ರಾಜಕೀಯಕ್ಕೆ ಸಂಬಂಧಿಸಿದ್ದು ಎಂದು ಮೇಲ್ನೋಟಕ್ಕೆ ಕಾಣುತ್ತದೆ ಅಷ್ಟೇ. ಆದರೆ ಹೋರಾಟ ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ ಎಂದ ರಾಹುಲ್‌ ಗಾಂಧಿ ಮುಂದಿನ ಸಾಲಿನಲ್ಲಿ ಕುಳಿತಿದ್ದ ಸಿಖ್‌ ಧರ್ಮೀಯರೊಬ್ಬರನ್ನು ಮಾತನಾಡಿಸಿ ತನ್ನ ಹೆಸರನ್ನು ಹೇಳುವಂತೆ ಕೇಳಿದರು.

ಟೋಪಿ ತೊಟ್ಟ ಅಣ್ಣ ನಿಮ್ಮ ಹೆಸರೇನು ಎಂದು ಕೇಳಿದ ರಾಗಾ ಭಾರತದಲ್ಲಿ ಸಿಖ್‌ ಜನರು ಪೇಟವನ್ನು ಧರಿಸಲು ಅನುಮತಿ ನೀಡಬಹುದೇ ಬೇಡವೇ ಅಥವಾ ಅವರು ಗುರುದ್ವಾರಕ್ಕೆ ಹೋಗುವುದು ಸಾಧ್ಯವೇ ಎಂಬುದಕ್ಕಾಗಿ ಹೋರಾಟಗಳು ನಡೆದಿವೆ. ಇದು ಕೇವಲ ಒಂದು ಧರ್ಮದಲ್ಲಿ ಮಾತ್ರವಲ್ಲ ಎಲ್ಲಾ ಧರ್ಮದಲ್ಲೂ ಇಂತಹ ಹೋರಾಟಗಳಿವೆ ಎಂದರು.

ಆರ್‌ಎಸ್‌ಎಸ್‌ ಕುರಿತು ಮಾತನಾಡಿದ ಅವರು ಕೆಲವು ರಾಜ್ಯಗಳು ಇತರೆ ರಾಜ್ಯಗಳಿಗಿಂತ ಕೀಳು, ಕೆಲವು ಧರ್ಮಗಳು ಇತರೆ ಧರ್ಮಗಳಿಗಿಂತ ಕೀಳು, ಕೆಲವು ಸಮುದಾಯಗಳು ಇತರೆ ಸಮುದಾಯಗಳಿಗಿಂತ ಕೀಳು ಎಂದು ಹೇಳುವುದು ಆರ್‌ಎಸ್‌ಎಸ್‌ನ ಸಿದ್ಧಾಂತವಾಗಿದೆ ಎಂದರು. ಲೋಕಸಭೆ, ವಿಧಾನಸಭೆ ಚುನಾವಣೆಗಳಲ್ಲಿ ಇಂತಹ ಟೀಕೆಗಳು, ಹೋರಾಟಗಳೇ ಕಂಡುಬರಲಿವೆ ಹೊರತು ಸೈದ್ಧಾಂತಿಕ ಹೋರಾಟಗಳಲ್ಲ ಎಂದರು.

ಅಲ್ಲದೇ ಹೋರಾಟ ನಾವು ಯಾವ ರೀತಿಯ ಭಾರತವನ್ನು ನಿರ್ಮಿಸಲಿದ್ದೇವೆ ಎಂಬುದರ ಕುರಿತು ಇರಬೇಕು. ಜನರು ಯಾವುದೇ ಪ್ರದೇಶಕ್ಕೆ ಸೇರಿದವರಾಗಿದ್ದರೂ, ಅವರಿಗೆ ತಮ್ಮದೇ ಆದ ಇತಿಹಾಸವಿದೆ, ತಮ್ಮದೇ ಆದ ಸಂಪ್ರದಾಯವಿದೆ, ತಮ್ಮದೇ ಆದ ಭಾಷೆ ಇದೆ. ಅವುಗಳೆಲ್ಲವೂ ಇತರರಂತೆ ಮುಖ್ಯ ಎಂದು ರಾಗಾ ಹೇಳಿದರು.

Tags:
error: Content is protected !!