Mysore
19
broken clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ರೋಹಿತ್‌ ವೆಮುಲ ಆತ್ಮಹತ್ಯೆ ಪ್ರಕರಣ: ಪೊಲೀಸರಿಂದ ಅಂತಿಮ ವರದಿ ಸಲ್ಲಿಕೆ!

ಹೈದರಾಬಾದ್‌: ಹೈದರಾಬಾದ್‌ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ರೋಹಿತ್‌ ವೆಮುಲ ಸಾವಿನ ಪ್ರಕರಣಕ್ಕೆ ಕೊನೆಗೂ ಅಂತ್ಯ ಸಿಕ್ಕಿದೆ. ಈ ಸಂಬಂಧ ಅಲ್ಲಿನ ಪೊಲೀಸರು ಸ್ಥಳೀಯ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದಾರೆ.

ವೆಮುಲ ಪ್ರಕರಣವನು ತನಿಖೆ ಮಾಡಿದ್ದ ಸೈಬರಾಬಾದ್‌ ಪೊಲೀಸರು ತಮ್ಮ ವರದಿಯನ್ನು ನ್ಯಾಯಾಲಯಕ್ಕೆ ನೀಡಿದ್ದರು, ಅದರಲ್ಲಿ ಅಸಲಿಗೆ “ರೋಹಿತ್‌ ವೆಮುಲ ಪರಿಶಿಷ್ಟ ಜಾತಿಗೆ ಸೇರಿದವರಲ್ಲ. ತಮ್ಮ ನಿಜವಾದ ಗುರುತು ಎಲ್ಲಿ ಬಯಲಾಗುತ್ತದೆಯೋ ಎಂಬ ಭಯದಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ವೆಮುಲಾ ಅವರಿಗೆ ಹಲವಾರು ಸಮಸ್ಯೆಗಳಿದ್ದವು. ಅವು ಅವರನ್ನು ಆತ್ಯಹತ್ಯಗೆ ಪ್ರೇರೇಪಿಸಿವೆ. ಪ್ರಮುಖವಾಗಿ ಅವರು ಪರಿಶಿಷ್ಟ ಜಾತಿಗೆ ಸೇರಿದವರಲ್ಲ ಎಂಬುದು ಅವರಿಗೂ ತಿಳಿದಿತ್ತು. ಅವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಸ್ವತಃ ಅವರ ತಾಯಿಯೇ ಕೊಡಿಸಿದ್ದರು. ಈ ವಿಷಯ ಬಹಿರಂಗವಾದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಮತ್ತು ಈವರೆಗೆ ಸಂಪಾದಿಸಿ ಎಲ್ಲಾ ಶೈಕ್ಷಣಿಕ ಪ್ರಮಾಣ ಪತ್ರಗಳು ವ್ಯರ್ಥವಾಗುವ ಜೊತೆಗೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಮ್ಮ ವರದಿಯಲ್ಲಿ ವಿವರಿಸಿದ್ದಾರೆ.

ರೋಹಿತ್‌ ವೆಮುಲಾ ಅವರು 2016 ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಿನ ಕುಲಪತಿ ಅಪ್ಪಾರಾವ್‌ ಪೊಡಿಲೆ ಮತ್ತು ಈಗಿನ ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ ಪ್ರಮುಖ ಆರೋಪಿಗಳಾಗಿದ್ದರು.

 

Tags: