ವಯನಾಡು: ಲೋಕಸಭೆ ಚುನಾವಣೆ ಘೋಷಣೆಯಾದ ಬಳಿಕ ಎರಡನೇ ಬಾರಿಗೆ ತಮ್ಮ ಸಂಸದೀಯ ಸ್ವಕ್ಷೇತ್ರವಾದ ಕೇರಳದ ವಯನಾಡಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭರ್ಜರಿ ರೋಡ್ ಶೋ ನಡೆಸಿದ್ದಾರೆ.
ಸೋಮವಾರ ಸುಲ್ತಾನ್ ಬತೇರಿಯ ಪ್ರದೇಶದಲ್ಲಿ ಕಾರಿನ ಮೇಲೆ ಕುಳಿತು ರಾಹುಲ್ ಗಾಂಧಿ ರೋಡ್ ಶೋ ನಡೆಸಿ, ರಸ್ತೆಯ ಇಕ್ಕೆಲಗಳಲ್ಲಿ ನೆರೆದಿಂದ ಸಾವಿರಾರು ಕಾರ್ಯಕರ್ತರತ್ತ ಕೈಬೀಸಿ ಮುಂದೆ ಸಾಗಿದರು.
ಇದಕ್ಕೂ ಮೊದಲು ತಮಿಳುನಾಡಿನ ಗಡಿಭಾಗದ ನೀಲಗಿರಿ ಜಿಲ್ಲೆಗೆ ತೆರಳಿ, ಅಲ್ಲಿನ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ರಾಹುಲ್ ಗಾಂಧಿ ಹೆಲಿಕಾಪ್ಟರ್ ತಪಾಸಣೆ ಮಾಡಿದ ಚುನಾವಣಾ ಅಧಿಕಾರಿಗಳು
ತಮಿಳುನಾಡಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೆಲಿಕಾಪ್ಟರ್ ಅನ್ನು ಚುನಾವಣಾ ಅಧಿಕಾರಿಗಳು ಸೋಮವಾರ ತಪಾಸಣೆ ನಡೆಸಿದರು.
ಕೇರಳದ ವಯನಾಡ್‌ಗೆ ತೆರಳುವ ಮುನ್ನ ನೀಲಿಗಿರಿಗೆ ತೆರಳಲು ಹೆಲಿಕಾಪ್ಟರ್ ಲ್ಯಾಂಡ್ ಮಾಡಿದ್ದರು. ರಾಹುಲ್ ಗಾಂಧಿ ಹೆಲಿಕಾಪ್ಟರ್‌ನಿಂದ ಇಳಿದ ನಂತರ ಫೈಯಿಂಗ್ ಸ್ಕ್ಯಾಡ್ ಅಧಿಕಾರಿಗಳು ಶೋಧ ನಡೆಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
https://www.instagram.com/reel/C5xrNGfSV79/?igsh=d3JwY24xdG5wOTMx





