ಇಸ್ಲಾಮಾಬಾದ್: ಇರಾನ್, ಅಮೇರಿಕಾ-ಇಸ್ರೇಲ್ ಯುದ್ಧದಿಂದಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ತೈಲ ಬಿಕ್ಕಟ್ಟು ಉಲ್ಬಣಗೊಂಡಿದೆ. ಇದರಿಂದ ಪಾಕಿಸ್ತಾನದಲ್ಲಿ ಗಣರಾಜ್ಯೋತ್ಸವ ಮೆರವಣಿಗೆ ರದ್ದಾಗಿದೆ.
ಮಾರ್ಚ್.23ರಂದು ನಿಗದಿಯಾಗಿದ್ದ ಪಾಕಿಸ್ತಾನ ದಿನಾಚರಣೆ ಮೆರವಣಿಗೆ ಮತ್ತು ಅದಕ್ಕೆ ಸಂಬಂಧಿಸಿದಂತೆ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸುವುದಾಗಿ ಪಾಕ್ ಪ್ರಧಾನಿ ಕಚೇರಿ ಘೋಷಣೆ ಮಾಡಿದೆ.
ಹಾರ್ಮುಜ್ ಜಲಸಂಧಿಯ ಮೂಲಕ ತೈಲ ಪೂರೈಕೆಯಲ್ಲಿನ ಅಡಚಣೆಯಿಂದಾಗಿ ಪಾಕಿಸ್ತಾನ ತೀವ್ರ ಇಂಧನ ಬಿಕ್ಕಟ್ಟನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಗಲ್ಫ್ ತೈಲ ಬಿಕ್ಕಟ್ಟು ಮತ್ತು ಸರ್ಕಾರ ಘೋಷಿಸಿದ ಕಠಿಣ ಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಮಾರ್ಚ್.23ರಂದು ಪಾಕಿಸ್ತಾನ ದಿನಾಚರಣೆ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ಆಚರಣೆಗಳನ್ನು ನಡೆಸಲಾಗುವುದಿಲ್ಲ ಎಂದು ಸರ್ಕಾರಿ ಹೇಳಿಕೆಯಲ್ಲಿ ನಿರ್ಧರಿಸಲಾಗಿದೆ.




